ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದ ಪ್ರಕಾಶ ಶರಣಪ್ಪ ಹುಲ್ಲೂರು ಅವರಿಗೆ ಧಾರವಾಡ ವಿಶ್ವ ವಿದ್ಯಾಲಯ ಡಾಕ್ಟರೇಟ್ (ಪಿ ಹೆಚ್ ಡಿ) ಪದವಿ ನೀಡಿ ಗೌರವಿಸಿದೆ..!
ಭೂಗೋಳಶಾಸ್ತ್ರ ವಿಷಯದಲ್ಲಿ “ಅಸೆಸಮೆಂಟ್ ಆಫ್ ಸೋಶಿಯೊ-ಎಕಾನಾಮಿಕ್ ಡೈಮನಶೇನ್ಸ್ ಆಫ್ ರೂರಲ್ ಡೆವಲಪಮೆಂಟ್ ಪ್ರೊಗ್ರಾಮ್ ಇನ್ ಗದಗ ಡಿಸ್ಟ್ರಿಕ್ಟ್ : ಎ ಜಿಯೋಗ್ರಾಫಿಕ್ ಅನಾಲೆಸಿಸ್” ಎಂಬ ಮಹಾ ಪ್ರಬಂಧ ಮಂಡಿಸಿದ ಹಿನ್ನೆಲೆಯಲ್ಲಿ ಡಾಕ್ಟರೇಟ್ ಪದವಿ ನೀಡಿರುವುದು ಇತಿಹಾಸ. ಭೂಗೋಳಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಲ್.ಟಿ.ನಾಯಕ ಎಂಬುವರು ಮಾರ್ಗದರ್ಶನ ನೀಡಿರುವುದು ವಿಶೇಷ. ಪ್ರಕಾಶ ಶರಣಪ್ಪ ಹಲ್ಲೂರು ಅವರ ಸಾಧನೆಗೆ ಸಹಪಾಠಿಗಳು ಸೇರಿದಂತೆ ಪಾಲಕರು, ಗಜೇಂದ್ರಗಡ ಹಾಗೂ ಹನುಮನಾಳದ ಅಭಿಮಾನಿಗಳು, ಹಿತೈಷಿಗಳು ಅಭಿನಂದಿಸಿದ್ದಾರೆ..!!