ದಿ ವಿಜಡಮ್ ಶಾಲೆಯಲ್ಲಿ ‘ಕೃಷಿ ಪ್ರಿಯ’ ಪತ್ರಿಕೆ 2 ನೇ ವರ್ಷದ ಸಂಭ್ರಮ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ದಿ ವಿಜಡಮ್ ಶಾಲೆಯಲ್ಲಿ ‘ಕೃಷಿ ಪ್ರಿಯ’ ಪತ್ರಿಕೆಯ 2 ನೇ ವರ್ಷದ ಸಂಭ್ರಮಾಚರಣೆ ಆಚರಿಸಲಾಗಿತು..!

ಬಿಡುವಿನ ವೇಳೆಯಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಕೇಕ್ ಕತ್ತರಿಸುವ ಮೂಲಕ ಸಂಭ್ರಮಕ್ಕೆ ಚಾಲನೆ ನೀಡಲಾಗಿತು. ಪತ್ರಿಕೆ ಸಮಾಜ ಮುಖಿಯಾಗಿ ಬೆಳೆಯಲಿ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವಂತಾಗಲಿ. ಸಾಮಾಜಿಕ ನ್ಯಾಯದ ಮೂಲಕ ಪತ್ರಿಕೆ ಇನ್ನೂ ಎತ್ತರ ಮಟ್ಟಕ್ಕೆ ಬೆಳೆಯಲಿ ಎಂದು ದಿ ವಿಜಡಮ್ ಶಾಲೆಯ ಕಾರ್ಯದರ್ಶಿ ಶಂಭು ಹಿರೇಮಠ ಪತ್ರಿಕೆಗೆ ಶುಭ ಹಾರೈಸಿದರು. ಮುಖಂಡರಾದ ಶರಣಬಸವ ಚಕ್ರಸಾಲಿ, ರಾಯಪ್ಪ ಹೂಗಾರ, ಮುಖ್ಯಗುರು ಗುರು ಅಂಗಡಿ, ಲಕ್ಷ್ಮಿ ಕುರಹಟ್ಟಿ, ಶಶಿಕಲಾ ಹಿರೇಮಠ, ಆಫ್ರೀನ್ ಮುಚ್ಚಾಲಿ, ರೇಷ್ಮಾ ಭಾಗವಾನ್, ರಾಜಮಾ ಯಾದವಾಡ, ಮಹೇಶ ಗಟ್ಟಿ, ರಾಮಣ್ಣ ಕುರಿ, ಫಕೀರಪ್ಪ ಮಂಡಗಿ ಹಾಗೂ ಚಂದ್ರಶೇಖರ ಯಲಿಗಾರ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು..!!