ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಬಿಸಿಯೂಟ ತಯಾರಿಸುವಾಗ ಕುಕ್ಕರ್ ಬ್ಲಾಸ್ಟ್ ಆಗಿ ಮುಖ್ಯ ಅಡುಗೆದಾರೆಯೊಬ್ಬಳಿಗೆ ಗಂಭೀರ ಗಾಯವಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗುಡದೂರುಕಲ್ಲು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದೆ..!
ಮುಖ್ಯ ಅಡುಗೆದಾರೆ ಗೌರಮ್ಮ ಹನುಮಂತಪ್ಪ (46) ಗಾಯಗೊಂಡಿರುವ ನತದೃಷ್ಟ ಮಹಿಳೆ. 25 ಲೀಟರ್ ಸಾಮರ್ಥ್ಯದ ಕುಕ್ಕರ್ ಬಳಸಿ ಅಡುಗೆ ತಯಾರಿಸುವ ವೇಳೆ ಏಕಾಏಕಿ ಬ್ಲಾಸ್ಟ್ ಆಗಿದ್ದು, ಮಹಿಳೆಯ ತೊಡೆ, ಸೊಂಟ ಭಾಗ ಸುಟ್ಟಿದೆ. ಚಿಕಿತ್ಸೆಗಾಗಿ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಸೂಚಿಸಲಾಗಿದೆ ಎಂದು ಕುಷ್ಟಗಿ ಅಕ್ಷರದಾಸೋಹ ತಾಲೂಕಾ ಅಧಿಕಾರಿ ಕೆ.ಶರಣಪ್ಪ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ..!!