ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮ ಪಂಚಾಯಿತಿಗೆ ಜಿಪಂ ಸಿಇಓ ರಾಹುಲ್ ಪಾಂಡೆಯ ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು..!
ಗ್ರಾಪಂನಿಂದ ಕೈಗೊಳ್ಳಲಾದ ಘನತ್ಯಾಜ್ಯ ವಿಲೆವಾರಿ ಘಟಕಕ್ಕೆ ಭೇಟಿ ನೀಡಿ, ಘನ ತ್ಯಾಜ್ಯಗಳ ವರ್ಗೀಕರಣ ಕುರಿತು ಸಲಹೆ ನೀಡಿದರು. ಅಲ್ಲದೇ, ಘಟಕಕ್ಕೆ ಸುತ್ತಲೂ ಗೊಡೆ ನಿರ್ಮಾಣ ಸೇರಿದಂತೆ ವಿದ್ಯುತ್ ಸರಬರಾಜಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳಾ ಭೀಮನಗೌಡ ಪಾಟೀಲ್ ಸಿಇಓ ಅವರಿಗೆ ಮನವಿಮಾಡಿಕೊಂಡರು. ಸ್ಪಂದಿಸಿದ ಸಿಇಓ ಅವರು ಖಾಲಿ ಜಾಗದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಅಚನೂರು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮುಂಭಾಗದ ಕೆರೆಗೆ ತಂತಿ ಬೇಲಿ ಅಳವಡಿಸಲು ಅನುದಾನಕ್ಕೆ ಸದಸ್ಯರು ಮನವಿಮಾಡಿಕೊಂಡರು. ತಾಪಂ ಇಓ ಶಿವಪ್ಪ ಸುಭೇದಾರ ಸೇರಿದಂತೆ ಎಡಿ ಹನುಮಗೌಡ, ಪಿಡಿಓ ಚಂದಪ್ಪ ಕವಡಿಕಾಯಿ, ಗ್ರಾಪಂ ಸದಸ್ಯರಾದ ದ್ಯಾವನಗೌಡ ಮಾಲಿಪಾಟೀಲ, ಹನುಮಂತ ಚೋಳೆ, ಬಸವರಾಜ ಹನುಮನಾಳ, ಮಂಜುನಾಥ ಬೀರಗೊಂಡರ್, ಶಂಕರಪ್ಪ ದಂಡಿನ ಇನ್ನಿತರರು ಉಪಸ್ಥಿತರಿದ್ದರು..!!