ಬಣ್ಣದಲ್ಲಿ ಮಿಂದೆದ್ದ ಶಾಲಾ ಮಕ್ಕಳು..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಇಡೀ ಶಾಲಾ ಮಕ್ಕಳು ಸೇರಿದಂತೆ ಶಿಕ್ಷಕ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗ ಬಣ್ಣದಲ್ಲಿ ಮಿಂದೆದ್ದರು. ಇವರುಗಳ ಖುಷಿಗೆ ಪಾರವೇ ಇದ್ದೀಲ್ಲ. ಇದು ಏಲ್ಲಿ ಜರುಗಿತು ಇತ್ಯಾದಿಗಳ ಬಗ್ಗೆ ನಿಮಗೆ ಆಶ್ಚರ್ಯವಾಗಿರಬಹುದು ಅಲ್ಲವೇ..? ಹಾಗೀದ್ದರೆ ಈ ಕೆಳಗಿನ ಸುದ್ದಿ ಗಮನಿಸಿರಿ..!

ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದ (ಖಾಸಗಿ) ನ್ಯಾಷನಲ್ ಪಬ್ಲಿಕ್ ಸ್ಕೂಲ್ ದಲ್ಲಿ ಪುಟಾಣಿ ಮಕ್ಕಳು-ಶಿಕ್ಷಕರು ವಿಶಿಷ್ಠವಾಗಿ ರಂಗಪಂಚಮಿ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು. ಹಬ್ಬದ ವಾತಾವರಣದಲ್ಲಿ ಯಾವುದೇ ವ್ಯತ್ಯಾಸ ಇಲ್ಲದೆ, ಹಲವು ಬಣ್ಣಗಳ ವಿನಿಮಯದ ಮೂಲಕ ಮಿಂದೆದ್ದಿದ್ದು ಕಂಡ ಬಂದಿತು. ಬಣ್ಣದ ಜೊತೆಗೆ ನೀರಿನೊಂದಿಗೆ ಹಾಡಿನ ತಾಳಕ್ಕೆ ಎಲ್ಲರೂ ಕುಣಿದಾಡಿದ್ದು, ನೋಡುಗರಿಗೆ ಶಾರೀರಿಕ ಶಿಕ್ಷಣದಲ್ಲಿ ಮನೋಲ್ಲಾಸದ ಪಾತ್ರ ಬಹಳಷ್ಟು ಮುಖ್ಯ ಎಂಬುದು ಅರಿವಿಗೆ ಬಂದಿತು. ವಾರ್ಷಿಕ ಪರೀಕ್ಷೆ ಪೂರ್ಣಗೊಳಿಸಿ, ಹೊಸ ವರ್ಷದ ಸಂಭ್ರಮದಲ್ಲಿರುವ (ಮುಂದಿನ ಶೈಕ್ಷಣಿಕ ವರ್ಷ) ಚಿಣ್ಣರ ಬಣ್ಣದಾಟದಲ್ಲಿ ಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ಶಿಕ್ಷಕ ವರ್ಗ ಪಾಲ್ಗೊಂಡಿದ್ದು ಕೂಡಾ ವಿಭಿನ್ನವಾಗಿ ಕಂಡು ಬಂದಿತು. ವರ್ಷದ ಕೊನೆಯ ಘಳಿಗೆಯಲ್ಲಿ ಇಂತಹ ವಿಶಿಷ್ಟ ಮನೋಲ್ಲಾಸ ಕಾರ್ಯಕ್ರಮಗಳು ಅವಶ್ಯ ಎಂಬ ಸಂದೇಶವನ್ನು ಈ ಸಂಸ್ಥೆ ಮನದಟ್ಟು ಮಾಡಿದ್ದಕ್ಕೆ ನಮ್ಮದೊಂದು ವಿಶೇಷ ಸಲಾಂ..!!

ಈಗಾಗಲೇ ಪರೀಕ್ಷೆ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಬರುವ ಶೈಕ್ಷಣಿಕ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಆಗಮಿಸುವಂತಾಗಲಿ ಎಂಬುದರ ಜೊತೆಗೆ ನೆನಪಿನ ಸಂಭ್ರಮ ಇದಾಗಲಿ ಎಂಬುದು ನಮ್ಮ ಆಶೆಯ..!

ಪ್ರವೀಣ ಗಡಾದ, ಸಂಸ್ಥೆಯ ಮುಖ್ಯಸ್ಥ