ಬೈಕ್ ಅಪಘಾತ : ಸವಾರ ಸ್ಥಳದಲ್ಲೇ ಸಾವು

 

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದ ಸವಾರನೊಬ್ಬ ಗುಂಡಿಗೆ ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಷ್ಟಗಿ ತಾಲೂಕಿನ ತಾವರಗೇರಾ ಸಮೀಪದ ಹುಲಿಹೈದರ ಗ್ರಾಮದ ಬಳಿ ಸಂಭವಿಸಿದೆ.!

ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಲಾಯದಹುಣಸಿಯ ಹನುಮೇಶ್ ತಂದೆ ಎಂಕಪ್ಪ ಗುಡೂರು ವಯಸ್ಸು 25 ಸಾವನ್ನಪ್ಪಿದ ದುರ್ದೈವಿ ಎಂದು ಗುರುತಿಸಲಾಗಿದೆ.
ಶುಕ್ರವಾರ ರಾತ್ರಿಯ ಸಮಯದಲ್ಲಿ ಹುಲಿಹೈದರ್ ವಿರುಪಾಪುರ ಕ್ರಾಸ್ ಬಳಿ ಪಲ್ಸರ್ ಬೈಕ್ ಅನ್ನು ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ತೆಗ್ಗಿನಲ್ಲಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಈ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.!!