ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪನೆ

 

ಕೃಷಿ ಪ್ರಿಯ ನ್ಯೂಸ್ |

ಬೆಂಗಳೂರು : ಹಿಂದುಳಿದ ವರ್ಗಗಳಲ್ಲಿಯೇ ಅತ್ಯಂತ ಹಿಂದುಳಿದಿರುವ ಕುಂಬಾರ ಸಮುದಾಯಕ್ಕೆ ಪ್ರತ್ಯೇಕವಾಗಿ ‘ಕರ್ನಾಟಕ ರಾಜ್ಯ ಕುಂಬಾರರ ಅಭಿವೃದ್ಧಿ ನಿಗಮ’ ಸ್ಥಾಪಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ..!


ಕುಂಬಾರ ಸೇರಿದಂತೆ ಇದೆ ಸಮುದಾಯಕ್ಕೆ ಸೇರಿದ ಪರ್ಯಾಯ ಪದಗಳಿಂದ ಕರೆಯಲ್ಪಡುವ ಚಕ್ರಸಾಲಿ, ಕುಮ್ಮಾರ, ಕುಲಾಲ ಎಂಬ ಆಯಾ ಪ್ರಾದೇಶಿಕವಾರು ಗುರುತಿಸಿಕೊಂಡಿರುವ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದನ್ನು ಸಮುದಾಯದವರು ಸರಕಾರವನ್ನು ಅಭಿನಂದಿಸಿದ್ದಾರೆ. ಕುಂಬಾರ ಸಮುದಾಯದ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದ್ದು, ಸರಕಾರ ಕೂಡಲೇ ಈ ಪ್ರತ್ಯೇಕ ನಿಗಮಕ್ಕೆ 100 ಕೋಟಿ ರೂಪಾಯಿಗಳ ಅನುದಾನ ನೀಡುವಂತೆ ಸಮುದಾಯದವರು ಒತ್ತಾಯಿಸಿದ್ದಾರೆ..!!