ವಿಶ್ವ ಛಾಯಾಚಿತ್ರ ಪ್ರದರ್ಶಕರ ಪಟ್ಟಿಯಲ್ಲಿ ಕೊಪ್ಪಳದ ‘ಪ್ರಕಾಶ ಕಂದಕೂರು’ ಅವರಿಗೆ 32 ನೇ ಸ್ಥಾನ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ವಿಶ್ವ ವಿಖ್ಯಾತ ಛಾಯಾಗ್ರಾಹಕ “ಪ್ರಕಾಶ ಕಂದಕೂರು” ಇವರು ವಿಶೇಷವಾಗಿ ನಮ್ಮ ಕೊಪ್ಪಳ ಜಿಲ್ಲೆಯವರು ಎಂದು ಹೇಳಲು ಹೆಮ್ಮೆ ಪಡುವಂತ ಈ ಸುದ್ದಿ ಎಂದರೆ ತಪ್ಪಾಗಲಾರದು..!

ಕೊಪ್ಪಳದ ಖ್ಯಾತ ಛಾಯಾಚಿತ್ರ ಗ್ರಾಹಕ ಪ್ರಕಾಶ ಕಂದಕೂರು ಅಂದರೆ ಯಾರಿಗೆ ತಾನೇ ಪರಿಚಯವಿಲ್ಲ ಹೇಳಿ, ಇಂತಹ ಅತ್ಯದ್ಭುತ ಜಿಲ್ಲೆಯ ಫೋಟೋಗ್ರಾಫರ್ ಇಂದು ವಿಶ್ವ ವಿಖ್ಯಾತರಾಗಿ ಹೊರಹೊಮ್ಮಿದ್ದಾರೆ ಎಂದು ತಿಳಿಸಲು ನಮಗೆ ಹೆಮ್ಮೆ ಅನಿಸುತ್ತದೆ. ಇವರು ಫೆಡರೇಷನ್ ಆಫ್ ಇಂಡಿಯನ್ ಫೊಟೋಗ್ರಫಿ(FIP) ಬಿಡುಗಡೆ ಮಾಡಿರುವ 2022ನೇ ಸಾಲಿನ ಅಗ್ರ 100 ಜನ ಯಶಸ್ವಿ ಛಾಯಾಚಿತ್ರ ಪ್ರದರ್ಶಕರ (TOP-100 Exhibitors-Global) ಜಾಗತಿಕ ಪಟ್ಟಿಯಲ್ಲಿ ಇವರು ಹೆಸರು 32 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ಅಗ್ರ 100 ಜನ ಭಾರತೀಯ ಪ್ರದರ್ಶಕರ ಪಟ್ಟಿಯಲ್ಲಿ ( TOP-100 Exhibitors-India) 11 ನೇ ಸ್ಥಾನ ಪಡೆದುಕೊಂಡಿದ್ದಾರೆ. ಇಂತಹ ಮಹಾನ್ ಸಾಧಕನ ಕುರಿತಾದ ಈ ಸಂತಸದ ವಿಷಯವನ್ನು ಓದುಗ ದೊರೆಗಳಾದ ತಮ್ಮೊಂದಿಗೆ ಹಂಚಿಕೊಳ್ಳಲು ಏಲ್ಲಿಲ್ಲದ ಅಭಿಮಾನವಾಗುತ್ತದೆ. ಜಗತ್ತಿನ ವಿಶಿಷ್ಟ ಫೋಟೋಗ್ರಫಿ ಸ್ಪರ್ಧಿಯಲ್ಲಿ ಈಗಾಗಲೇ ಪ್ರಕಾಶ ಕಂದಕೂರು ಅವರು ನೂರಾರು ಪದಕಗಳನ್ನು ತಮ್ಮ ಮೂಡಿಗೇರಿಸಿಕೊಂಡಿದ್ದಾರೆ. ಅಲ್ಲದೆ, ಇವರು ಜಾಗತಿಕ ಮಟ್ಟದ ಛಾಯಾಚಿತ್ರ ಪ್ರದರ್ಶಕರ ಪಟ್ಟಿಯಲ್ಲಿ ಇವರು ಹೆಸರು ಮೊದಲ ಸ್ಥಾನದಲ್ಲಿ ಬರುವಂತಾಗಲಿ ಎಂಬುದು ನಮ್ಮ ಬಯಕೆ..!!