ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲದ ಚರ್ಚೆ ಮಾತ್ರ ಕೊಪ್ಪಳ ಜಿಲ್ಲೆಯಲ್ಲಿ ಜೋರಾಗಿಯೇ ನಡೆದಿದೆ..!
ರಾಜ್ಯದಲ್ಲಿಯೇ ಅತಿ ಹೆಚ್ಚು ಹಾಲುಮತ ಸಮುದಾಯದ ಜನಸಂಖ್ಯೆ ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ಇದೇ ಸಮುದಾಯದ ಪ್ರಭಲ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯದಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ನೀಡುವರು ಎಂಬ ಚರ್ಚೆಗೆ ಮಾತ್ರ ಫೈನಲ್ ಟಚ್ ಸಿಗುತ್ತಿಲ್ಲವಾಗಿದೆ. ಮಾಜಿ ಸಚಿವ ಬಿ.ಬಿ ಚಿಮ್ಮನಕಟ್ಟಿ ಅವರು ಬಾದಾಮಿ ಕ್ಷೇತ್ರದ ವೇದಿಕೆವೊಂದರಲ್ಲಿ ಸಿದ್ಧರಾಮಯ್ಯನವರ ವಿರುದ್ಧ ಆಕ್ರೋಶವ್ಯಕ್ತಪಡಿಸಿ, ಕ್ಷೇತ್ರ ಬಿಟ್ಟುಕೊಡಲು ಗುಡುಗಿದರೋ.. ಅಲ್ಲಿಂದ ಇಲ್ಲಿಯವರೆಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಬಾರಿ ಕೊಪ್ಪಳ ವಿಧಾನಸಭಾ ಕ್ಷೇತ್ರನಾ.. ಕುಷ್ಟಗಿ, ಕೊಲಾರ ಅಥವಾ ವರುಣಾ ಕ್ಷೇತ್ರವಾ ಇಲ್ಲ.. ಇಲ್ಲ… ರೀ.. ಪುನಃ ಮರಳಿ ಬಾದಾಮಿಯಲ್ಲಿಯೇ ಸ್ಪರ್ಧಿಸಲಿದ್ದಾರೆ ಎಂಬ ಶಬ್ಧಗಳು ಇಲ್ಲಿನವರಿಗೆ ಕ್ಲಿಷೆಯಾಗಿಬಿಟ್ಟಿವೆ.
1991 ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸಿದ್ಧರಾಮಯ್ಯ ಸ್ಪರ್ಧೆ ನೀಡಿ, ಸೋಲು ಅನುಭವಿಸಿರುವ ಬಗ್ಗೆ ಸ್ವತಃ ಸಿದ್ಧರಾಮಯ್ಯನವರು, ಇಲ್ಲಿನ ಸಭೆ ಸಮಾರಂಭ ಹಾಗೂ ವೇದಿಕೆಗಳಲ್ಲಿ ಇಲ್ಲಿನವರ (ಕೊಪ್ಪಳದವರ) ರಾಜಕೀಯ ನಾಡಿ ಮಿಡಿತದ ಕುರಿತು ನೆನಪಿನ ಬುತ್ತಿ ಬಿಚ್ಚಿಡುತ್ತಿದ್ದು ಹೊಸದೆನಲ್ಲ. ಆದರೆ, ಅವರ ಅಪ್ಪಟ ಅಭಿಮಾನಿಗಳು ಸಿದ್ದು ಅವರಿಗೆ ಕೊಪ್ಪಳ ಜಿಲ್ಲೆಯ ಕೊಪ್ಪಳ ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ನೀಡಲಿದ್ದಾರೆ ಎಂಬ ಕುತೂಹಲದ ಸುದ್ದಿಗೆ ಮಾತ್ರ ತಾರ್ಕಿಕ ಹಂತ ಲಭ್ಯವಾಗಬೇಕಾಗಿದೆ. ಸಿದ್ಧರಾಮಯ್ಯ ಸ್ಪರ್ಧಿಸಲು ಕ್ಷೇತ್ರಗಳ ಆಯ್ಕೆ ವಿಚಾರದಲ್ಲಿ ಇನ್ನೂವರೆಗೂ ಪಕ್ಕಾ ಆಗದ ಈ ಸಂದರ್ಭದಲ್ಲಿ ಸಿದ್ದು ಅಭಿಮಾನಿಗಳಿಗೆ ನಿರಾಶೆ ಇರುವುದಂತು ಸತ್ಯ..!!
(ಮುಂದುವರೆಯಲಿದೆ.. )
# Krushi Priya # Siddaramayya #
# Ex CM # Kushtagi Assembly #
# Assembly Choice# #Koppal MP# #Sharanappa Kumbar#
#ಕೃಷಿ ಪ್ರಿಯ ನ್ಯೂಸ್ # # ಸಿದ್ದರಾಮಯ್ಯ # #ಮಾಜಿ ಮುಖ್ಯಮಂತ್ರಿ # #ಕುಷ್ಟಗಿ ವಿಧಾನಸಭಾ ಕ್ಷೇತ್ರ# #ಕ್ಷೇತ್ರ ಹುಡುಕಾಟ# #ಕೊಪ್ಪಳ ಎಂಪಿ# #ಶರಣಪ್ಪ ಕುಂಬಾರ#