ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಸಾಸ್ವಿಹಾಳ ಗ್ರಾಮದ ಬಳಿಯ ಜಮೀನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬಣವಿ ಸೇರಿ ಕೃಷಿ ಸಲಕರಣೆಗಳು ಸುಟ್ಟು ಭಸ್ಮವಾದ ಘಟನೆ ಬುಧವಾರ ಬೆಳಗಿನ ಜಾವ ಸಂಭವಿಸಿದೆ.!
ಸಾಸ್ವಿಹಾಳ ಗ್ರಾಮದ ಅಮರೇಶ ತಂದೆ ತಿಮ್ಮಣ್ಣ ಮಡ್ಡೆರ ಎಂಬುವರ ಜಮೀನಿನಲ್ಲಿನ ಬೋರವರಲ್ ಪೈಪುಗಳ, ಕೇಬಲ್, ಸುಟ್ಟಿದೆ. ಅದೇರೀತಿ ಮತ್ತೊಬ್ಬ ರೈತ ಕಾಳಪ್ಪ ಕಮ್ಮಾರ ಅವರ ಜಮೀನಿನಲ್ಲಿನ ಬಣವಿ ಸುಟ್ಟು ಬೂದಿಯಾಗಿದೆ. ಬಣವಿ, ಬೋರವೃಲ್ ಸಾಮಾಗ್ರಿ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಸರಕಾರ ಪರಿಹಾರ ನೀಡಬೇಕು ಎಂದು ನೊಂದ ರೈತರು ಸೇರಿದಂತೆ ಗ್ರಾಮಸ್ಥರು ಒತ್ತಾಯಿಸುತಿದ್ದಾರೆ.!!