ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಮಾದರಿ : ರಾಜ್ಯಪಾಲ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಭಾರತೀಯ ಆಧ್ಯಾತ್ಮಿಕ ಪರಂಪರೆ ಸಂಸ್ಕೃತಿ ಜಗತ್ತಿಗೆ ಮಾದರಿಯಾಗಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಹೇಳಿದರು..!

ಜಿಲ್ಲೆಯ ಕುಷ್ಟಗಿ ಸಮೀಪದ ಶ್ರೀ ಅಮರನಾಥೇಶ್ವರ ಮಹಾದೇವಮಠ ನಾಗಾಸಾಧು ಆಶ್ರಮದ ಆವರಣದಲ್ಲಿ ನೂತನವಾಗಿ ನಿರ್ಮುಸಿದ ಪಂಚಮುಖಿ ಆಂಜನೇಯ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಜಗತ್ತಿನಲ್ಲಿಯೇ ಅತ್ಯಂತ ವಿಶಿಷ್ಠವಾಗಿರುವ ಸಂಸ್ಕೃತಿಗೆ ಸನಾತನ ಧರ್ಮ ತಳಹದಿಯಾಗಿದೆ. ಇಂತಹ ಸಂಸ್ಕೃತಿಗೆ ಸನಾತನ ಪರಂಪರೆಯ ಪ್ರತೀಕವಾದ ಶ್ರೇಷ್ಠ ನಾಗಾಸಾಧುಗಳ ಕೊಡುಗೆ ಬಹಳಷ್ಟಿದೆ ಎಂದು ರಾಜ್ಯಪಾಲರು ನಮ್ಮ ಮೂಲ ಭಾರತೀಯ ಸಂಸ್ಕೃತಿಯನ್ನು ಬಣ್ಣಿಸಿದರು. ಬಳಿಕ ಗದಗ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದರು. ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ದೇಶದ ನಾನಾ ಪ್ರದೇಶಗಳಿಂದ ಆಗಮಿಸಿದ ಶ್ರೇಷ್ಠ ನಾಗಸಾಧುಗಳ ಪಡೆಯೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.!!

ಕುಷ್ಟಗಿ ಯಿಂದ ಗಜೇಂದ್ರಗಡ ಮುಖ್ಯರಸ್ತೆಯಿಂದ ವಿವಿಧ ಗ್ರಾಮಗಳು ಸೇರಿದಂತೆ ಆಶ್ರಮಕ್ಕಿರುವ ರಸ್ತೆಯ ಸ್ಥಿತಿ ಗಮನಿಸಿದ ರಾಜ್ಯಪಾಲರು ಆಪ್ತರ ಬಳಿ ಕಳವಳವ್ಯಕ್ತಪಡಿಸಿದ್ದು ಕೇಳಿಬಂದಿತು..!