ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಪರಿಸದ ಮಡಿಲಲ್ಲಿರುವ ಶಾಲೆಯಿಂದ ಹೊರ ಹೋಗಲು ಮನಸ್ಸು ಆಗುತ್ತಿಲ್ಲ. ಆದಾಗ್ಯೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇದು ಅನಿವಾರ್ಯವಾಗಿದೆ ಎಂಬ ಮಾತುಗಳನ್ನು ಇಲ್ಲಿನ ಪುಟ್ಟ ಪುಟ್ಟ ಮಕ್ಕಳು ಭಾವನಾತ್ಮವಾಗಿ ಮಾತನಾಡಿದ ಪ್ರಸಂಗ ಮಾತ್ರ ವಿಶೇಷವಾಗಿತ್ತು..!
ಮೇಲಿನ ಪ್ರಸಂಗ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ದಿ ವಿಜಡಮ್ ಶಾಲೆಯ 5 ನೇ ತರಗತಿಯ ಮಕ್ಕಳು, ಶಾಲಾ ಬಿಳ್ಕೋಡಿಗೆ ಸಮಾರಂಭದಲ್ಲಿ ಮನಸ್ಸು ಬಿಚ್ಚಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅಗಲಿಕೆ ಅನಿವಾರ್ಯವಾಗಿದೆ. ಸಮಗ್ರ ಅಧ್ಯಯನದ ಮೂಲಕ ಈ ಶಾಲೆಯಿಂದ ತೆರಳುತ್ತಿದ್ದೇವೆ. ಶಾಲೆಯ ಶಿಕ್ಷಕರೊಂದಿಗಿನ ಸಂಬಂಧ ಬಹಳಷ್ಟು ಅನ್ಯೋನ್ಯವಾಗಿತ್ತು. ಈ ಶಾಲೆಯಲ್ಲಿ ಎಲ್ಲವೂ ನಮಗೆ ಮೊದಲ ಅನುಭವ. ನಮ್ಮದೆ ಮೊದಲ ಬ್ಯಾಚ್ ಆಗಿರುವುದರಿಂದ ನಮಗೆ ಯಾವುದೇ ತರಹದ ಕೀಳಿರಿಮೆಯ ವ್ಯತ್ಯಾಸ ಕಂಡು ಬರಲಿಲ್ಲವೆಂದು ತಮ್ಮ ಅಭಿಪ್ರಾಯಗಳನ್ನು ಮನದಾಳದಿಂದ ಪತ್ರಿಕೆವೊಂದಿಗೆ ಮುಕ್ತವಾಗಿ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಸಂಸ್ಥೆಯ ಕಾರ್ಯದರ್ಶಿ ಶಂಭು ಹಿರೇಮಠ, ಮುಖ್ಯಗುರು ಗುರು ಅಂಗಡಿ ಶಿಕ್ಷಕರಾದ ಲಕ್ಷ್ಮಿ ಕುರಹಟ್ಟಿ, ಶಶಿಕಲಾ ಹಿರೇಮಠ, ಆಫ್ರೀನ್ ಮುಚ್ಚಾಲಿ, ರೇಷ್ಮಾ ಭಾಗವಾನ್, ರಾಜಮಾ ಯಾದವಾಡ, ಮಹೇಶ ಗಟ್ಟಿ, ರಾಮಣ್ಣ ಕುರಿ, ಫಕೀರಪ್ಪ ಮಂಡಗಿ ಹಾಗೂ ಚಂದ್ರಶೇಖರ ಯಲಿಗಾರ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಇದ್ದರು..!!