ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ಮಧ್ಯೆ ತೀವ್ರ ಕೆಸರಾಟ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಖಾಸಗಿ ಚಾನಲವೊಂದು ರಾಷ್ಟ್ರೀಯ ಹೆದ್ದಾರಿ ವೃತ್ತದಲ್ಲಿ ಹಮ್ಮಿಕೊಂಡಿದ್ದ “ಚುನಾವಣೆ ಬಹಿರಂಗ ಚರ್ಚೆ” ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಆರೋಪ ಪ್ರತ್ಯಾರೋಪಗಳು ನಡೆದು, ಬಳಿಕ ಘಟನೆ ತೀವ್ರತರ ಹಂತ ತಲುಪಿ ಹೋಗಿದ್ದು ಕಂಡು ಬಂದಿತು..!

ಬಯ್ಯಾಪೂರು ಕಳ್ಳ.. ಕಳ್ಳ… ಕಿಲೋ ಮೀಟರ್ ಗೆ 2 ಲಕ್ಷ ರೂಪಾಯಿಗಳ ಲಂಚ ಪಡೆದಿದ್ದಾನೆ ಎಂದು 500 ರೂಪಾಯಿಗಳ ಮುಖ ಬೆಲೆಯ ನೋಟುಗಳನ್ನು ಪ್ರದರ್ಶಿಸುವ ಮೂಲಕ ಘೋಷಣೆಗಳೊಂದಿಗೆ ಬಿಜೆಪಿ ಕಾರ್ಯರ್ತರು, ಬಯ್ಯಾಪೂರು ವಿರುದ್ಧ ಚೀರಾಡಿ, ಕೂಗಾಡಿದರು. ಇದಕ್ಕೆ ನಾವು ಏನು ಕಡಿಮೆ ಇಲ್ಲವೆಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೂಡಾ ದೊಡ್ಡನಗೌಡ ಸುಳ್ಳ.. ಸುಳ್ಳ… ಬಿಜೆಪಿ ಸರಕಾರ ಶೇ.40 ರಷ್ಟು ಕಮ್ಮಿಶನ್ ಸರಕಾರ ಎಂದು ಘೋಷಣೆ ಕೂಗಿದರು.

 

ಎರಡು ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರು ತಮ್ಮ ತಮ್ಮ ನಾಯಕನನ್ನು ಬೆಂಬಲಿಸುವ ಮೂಲಕ ವಿವಿಧ ಆರೋಪಗಳೊಂದಿಗೆ ವಿರೋಧದ ಘೋಷಣೆಗಳು ಮಾತ್ರ ಮುಗಿಲು ಮುಟ್ಟಿದ್ದವು. ಎರಡು ಪಕ್ಷಗಳ ಧ್ವಜ ಹಿಡಿದು, ಕಾರ್ಯಕರ್ತರು ನಡೆಸಿದ ಪ್ರಹಸನವು ಸಂಚಾರಿಗಳಿಗೆ ತೀವ್ರವಾದ ಅಡಚಣೆ ಉಂಟಾದ ಘಟನೆ ಜರುಗಿತು. ಮಧ್ಯೆ ಪ್ರವೇಶಿಸಿದ ಪೊಲೀಸರು ಘಟನೆ ತಿಳಿಗೊಳಿಸುವುದಕ್ಕೆ ಮುಂದಾದರು. ಪಿಎಸ್ ಐ ಮಧ್ಯೆ ಪ್ರವೇಶಿಸಿ, ಈ ವಿಚಿತ್ರ ಘಟನೆಗೆ ಕಾರಣ ತಿಳಿದು, ಎರಡು ಗುಂಪುಗಳನ್ನು ಚದುರಿಸುವಲ್ಲಿ ಯಶಸ್ವಿಯಾದರು. ವಿಧಾನಸಭೆ ಚುನಾವಣೆ ಘೋಷಣೆ ಮುನ್ನವೇ ಈ ತರಹದ ಘಟನೆ ವೀಕ್ಷಿಸಿದವರು… ಚುನಾವಣೆ ಘೋಷಣೆಯಾದ ಬಳಿಕ ಕ್ಷೇತ್ರದಲ್ಲಿ ಯಾವ ತರಹದ ಪರಿಸ್ಥಿತಿ ನಿರ್ಮಾಣ ಆಗಬಹುದು ಎನು.. ಹೇಗೆ..? ಎಂಬ ಪ್ರಶ್ನೆಗಳನ್ನು ತಮಗೆ ತಾವೇ ಹಾಕಿಕೊಂಡಿದ್ದು ಕೇಳಿ ಬಂದಿತು..!!