ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಕೊಪ್ಪಳದ ಬಹುತ್ವ ಮೀಡಿಯಾ ಹೌಸ್, ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಒಕ್ಕೂಟದ ಸಹಯೋಗದಲ್ಲಿ ಹೋರಾಟಗಾರ ಜೆ.ಭಾರದ್ವಾಜರ ಅಭಿನಂದನಾ ಗ್ರಂಥ ದೇಶಮಂಟೆ ಮನುಷುಲು(ಸಂ. ಸಿರಾಜ್ ಬಿಸರಳ್ಳಿ) ಹಾಗೂ ಜೀವನ ಕಥನ ‘ಲಾಲ್ ಸಲಾಂ ಕಾಮ್ರೆಡ್’ (ಸಿರಾಜ್ ಬಿಸರಳ್ಳಿ) ಎಂಬ ಎರಡು ಪುಸ್ತಕಗಳು ಲೋಕಾರ್ಪಣೆ ಗೊಳ್ಳಲಿವೆ..!
ಹಿರಿಯ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕುಂ.ವೀರಭದ್ರಪ್ಪ ಅವರು ಈ ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಜೆ.ಭಾರದ್ವಾಜ್ ಉಪಸ್ಥಿತರಿರಲಿದ್ದಾರೆ.
ಅಧ್ಯಕ್ಷತೆಯನ್ನು ಎಸ್.ಮಣಿ ಸಿಪಿಐಎಂಎಲ್ ರಾಜ್ಯ ಸಮಿತಿ ಸದಸ್ಯರು, ಬೆಂಗಳೂರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿ.ಪೀರಬಾಷಾ, ರಾಯಚೂರಿನ ನ್ಯಾಯವಾದಿಗಳಾದ ಅಜಿತಾ ಅನಪರ್ಥಿ, ಗಂಗಾವತಿ ವಿದ್ಯಾನಿಕೇತನ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಇತಿಹಾಸಕಾರ ಡಾ.ಶರಣಬಸಪ್ಪ ಕೋಲ್ಕಾರ, ಬರಹಗಾರ ಡಾ.ಶಿವಕುಮಾರ ಮಾಲಿಪಾಟೀಲ್, ಸಿಂಧನೂರಿನ ಹೋರಾಟಗಾರರಾದ ಹೆಚ್.ಎನ್.ಬಡಿಗೇರ, ರಾಯಚೂರಿನ ಅಂಬಣ್ಣ ಅರೋಲಿಕ ಆಗಮಿಸಲಿದ್ದಾರೆ.