ಕ್ಯಾದಿಗುಪ್ಪಾ ಚೆಕ್ ಪೊಸ್ಟ್ ಬಳಿ 2,50,000 ಹಣ ವಶ..!

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಯಾವುದೇ ದಾಖಲೆಗಳು ಇಲ್ಲದೇ  ಸಾಗಿಸುತಿದ್ದ 2.50.000 ರೂಪಾಯಿಗಳ ನಗದು ಹಣವನ್ನು ಪೊಲೀಸರು ವಶ ಪಡಿಸಿಕೊಂಡ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪಾದ ಚೆಕ್ ಪೋಸ್ಟ್ ಬಳಿ ಜರುಗಿದೆ..!

 ಇಲಕಲ್ಲ ಕಡೆಯಿಂದ ಕುಷ್ಟಗಿ ಪಟ್ಟಣಕ್ಕೆ ಆಗಮಿಸುತ್ತಿದ್ದ ಬಿಳಿ ಸ್ಕಾರಪಿವೊಂದರಲ್ಲಿ ಚಾಲಕ ಸೇರಿದಂತೆ ಏಳುಜನ ಪ್ರಯಾಣಿಸುತಿದ್ದನ್ನು ಕ್ಯಾದಿಗುಪ್ಪಾ ಚೆಕ್ ಪೋಸ್ಟ್ ಬಳಿ ಪೊಲೀಸರು ತಡೆದು, ಪರಿಶೀಲಿಸಲಾಗಿ ಎಲ್ಲಿಗೋ ಹಣ ಸಾಗಿಸುತಿದ್ದ ಕುರಿತು ದಾಖಲೆ ಕೇಳಲಾಗಿದ್ದು, ಲಭ್ಯವಾಗದ ಹಿನ್ನೆಲೆಯಲ್ಲಿ ಕುಷ್ಟಗಿ ಪಿಎಸ್ ಐ ಮೌನೇಶ ರಾಠೋಡ ಅವರು ಕಾರು ಸಮೇತ ಹಣ ವಶಕ್ಕೆ ಪಡೆದು, ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ..!!