ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜೇನುನೊಣಗಳ ಕಡಿತಕ್ಕೆ ಒಳಗಾಗಿ ಅಸ್ವಸ್ಥಗೊಂಡವರ ಪೈಕಿ ಮೂವರು ವಿದ್ಯಾರ್ಥಿಗಳು (ಆರ್.ಎಮ್.ಎಸ್.ಎ.) ಆಸ್ಪತ್ರೆಯಲ್ಲಿ ಪರೀಕ್ಷೆ ಬರೆದಿರುವುದು ವಿಶೇಷ..!
ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ವೀರೇಶ ಹಿರೇಮಠ,
ಗೋತಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಚಂದ್ರಶೇಖರ್ ಮಾಲಿ ಪಾಟೀಲ್, ಮಾವಿನಿಟಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಅಶ್ವಿನಿ ಮಡಿವಾಳರ ಚಿಕಿತ್ಸೆ ಪಡೆಯುತ್ತಿರುವ ಈ ಮೂರು ವಿದ್ಯಾರ್ಥಿಗಳಿಗೆ ತಾಲೂಕಾ ಆಸ್ಪತ್ರೆ ಬೆಡ್ಡಿನಲ್ಲಿಯೇ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿಸೆ.
ಕುಷ್ಟಗಿ ಪಟ್ಟಣದ ಕ್ರೈಸ್ತ ದ ಕಿಂಗ್ ಶಾಲೆಯಲ್ಲಿ ತೆರೆಯಲಾಗಿರುವ ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ ಜೇನುನೊಣಗಳು ದಾಳಿ ಮಾಡಿದ್ದವು. ಘಟನೆಯಿಂದ ವಿದ್ಯಾರ್ಥಿಗಳು ಚಿಕಿತ್ಸೆಗಾಗಿ ತಾಲೂಕಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಡಿಡಿಪಿಐ ಭೇಟಿ : ಡಿಡಿಪಿಐ ಮುತ್ತುರೆಡ್ಡಿ ರಡ್ಡೇರ ಹಾಗೂ ಬಿಇಓ ಸುರೇಂದ್ರ ಕಾಂಬಳೆ ಅವರು ಆಸ್ಪತ್ರೆಗೆ ಭೇಟಿ ನೀಡಿ, ಜೇನುನೊಣಗಳ ಕಡಿತದಿಂದ ಅಸ್ವಸ್ಥತೆಗೊಂಡಿರುವ ಮಕ್ಕಳ ಆರೋಗ್ಯ ವಿಚಾರಿಸಿ, ಮಕ್ಕಳಿಗೆ ಧೈರ್ಯ ತುಂಬಿದ ಪ್ರಸಂಗ ಜರುಗಿತು..!!