ಕುಷ್ಟಗಿ ‘ಅಭಿವೃದ್ಧಿಗೆ’ ಸಿದ್ದು ಸ್ಪರ್ಧಿಸಲೇಬೇಕು ಒತ್ತಾಯ..!?

 


ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ವಿಧಾನಸಭಾ ಕ್ಷೇತ್ರ ಎಂದು ಪಟ್ಟ ಕಟ್ಟಿಕೊಂಡಿರುವ ‘ಕುಷ್ಟಗಿ’ಯಿಂದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸ್ಫರ್ಧೆ ನೀಡಲೇಬೇಕು ಎಂಬ ಒಕ್ಕೊರಲಿನ ಕೂಗು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ..!

ಡಾಕ್ಟರ್ ನಂಜುಂಡಪ್ಪ ವರದಿ ಪ್ರಕಾರ ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಕುಷ್ಟಗಿಯೂ ಒಂದು. ಇಂತಹ ಅಭಿವೃದ್ಧಿ ಕಾಣದ ಕ್ಷೇತ್ರದಲ್ಲಿ ಮುಖ್ಯಮಂತ್ರಿ ರೇಸ್ ನಲ್ಲಿರುವ ಸಿದ್ಧರಾಮಯ್ಯನವರು ಸ್ಪರ್ಧೆ ನೀಡಿದರೆ, ‘ಜಯ’ ಅವರ ಪಾಲಾಗಲಿದೆ ಎಂಬುದು ಅವರ ಸಮುದಾಯದವರಿಗೆ ಅಚಲ ನಂಬಿಕೆ. ಕ್ಷೇತ್ರದಲ್ಲಿ ಸಿದ್ಧರಾಮಯ್ಯನವರು ಸ್ಪರ್ಧೆ ನೀಡಿದ್ದಾದರೇ, ಇವರದ್ದೆ ಸಮುದಾಯದ 50 ಸಾವಿರಕ್ಕೂ ಅಧಿಕ ಮತದಾರರ ಪೈಕಿ ಬಹುತೇಕ ಮತಗಳು ಇವರ ಪಾಲಾಗಲಿವೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯಗಳಲ್ಲಿ ಇದೊಂದಾಗಿದೆ. ಅಲ್ಲದೆ, ಕ್ಷೇತ್ರದ ಅಭಿವೃದ್ಧಿ ಕನಸುಗಳೊಂದಿಗೆ ಹಿಂದುಳಿದ ಜನಾಂಗದ ಪ್ರಬಲ ನಾಯಕನನ್ನು ಕ್ಷೇತ್ರದಿಂದ ಆಯ್ಕೆಮಾಡಿದ ಹೆಮ್ಮೆಗಾದರೂ ಬೆಂಬಲ ನೀಡುವ ಇರಾದೆ ಕ್ಷೇತ್ರದವರದ್ದಾಗಿದೆ.

ಮಹಾಸ್ವಾಮಿಗಳ ಒತ್ತಾಯ..!? : ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ ತಾವು ಸ್ಪರ್ಧೆ ನೀಡಬೇಕು. ತಮಗೆ ಅಧಿಕ ಮತಗಳಿಂದ ಜಯವಾಗುತ್ತದೆ ಎಂದು ಸ್ವತಃ ಸಿದ್ಧರಾಮಯ್ಯನವರಿಗೆ ಕೊಪ್ಪಳ ಜಿಲ್ಲೆಯ ಪ್ರಮುಖ ಮಠದ ಮಹಾಸ್ವಾಮಿಗಳೊಬ್ಬರು ಒತ್ತಾಯಮಾಡಿರುವುದು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಇದರಿಂದ ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ ನೀಡುವ ಸುಳಿವು ಇಲ್ಲಿನ ಸಿದ್ದು ಅಭಿಮಾನಿಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ..!!

 

# Siddaramayya # Siddu #

# Congress # # Kushtagi #

# Support # # Halumata Samudaya # # Contest #

# ಸಿದ್ಧರಾಮಯ್ಯ # # ಸಿದ್ದು #

# ಕಾಂಗ್ರೆಸ್ # # ಸ್ಪರ್ಧೆ # # ಕುಷ್ಟಗಿ ಕ್ಷೇತ್ರ #

# ಬೆಂಬಲ # #ಹಾಲುಮತ ಸಮುದಾಯ #