ಸಿದ್ದುಗೆ ಸೋಲಿನಲ್ಲಿಯೂ ಸಿಹಿ ನೀಡಿದ ‘ಕುಷ್ಟಗಿ’ ಕ್ಷೇತ್ರ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸೋಲಿನಲ್ಲಿಯೂ ‘ಕುಷ್ಟಗಿ’ ವಿಧಾನಸಭಾ ಕ್ಷೇತ್ರ ಸಿಹಿ ನೀಡಿರುವುದು ವಿಶೇಷ..!

1991 ರಲ್ಲಿ ಜರುಗಿದ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು (ಜನತಾ ದಳ ಪಕ್ಷದಿಂದ) ಸ್ಪರ್ಧೆ ನೀಡಿ, 11197 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಇದೊಂದು ರಾಜಕೀಯ ಇತಿಹಾಸ ಕೂಡಾ ಹೌದು. ಆದರೆ, ನಾವು ಸಿದ್ಧರಾಮಯ್ಯನವರು, ಹೇಗೆ ಸೋತರು, ಈ ಸೋಲಿಗೆ ಯಾರು ಕಾರಣರು, ಸೋಲಿಗೆ ಕಾರಣರಾದ ಮಹಾಶಯರು ಈ ಸಧ್ಯ ಏಲ್ಲಿದ್ದಾರೆ. ಆಗ ಸಿದ್ಧು ವಿರುದ್ಧ ಜಯಶಾಲಿಯಾದ ‘ಬಸವರಾಜ ಪಾಟೀಲ ಅನ್ವರಿ’ ಅವರು ಮುಂದಿನ ರಾಜಕೀಯ ಜೀವನದಲ್ಲಿ ಹೇಗೆ ಮೂಲೆಗುಂಪಾದರು ಎಂಬ ಇತ್ಯಾದಿ ರಾಜಕೀಯ ಇತಿಹಾಸ ಕುರಿತು ನಾವು ಹೇಳಲು ಹೋರಟಿಲ್ಲ. ಆದರೆ, ಸಿದ್ಧರಾಮಯ್ಯನವರ ಆಗಿನ ಸೋಲಿನಲ್ಲಿಯೂ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮತದಾರ ಪ್ರಭುಗಳು ಮಾತ್ರ ಇವರನ್ನು ಕೈಹಿಡಿದು, ಸಾವಿರಕ್ಕೂ ಅಧಿಕ ಮತಗಳನ್ನು ಜಯಶಾಲಿಯಾದ ಅಭ್ಯರ್ಥಿಗಿಂತ ಹೆಚ್ಚು ಮತಗಳನ್ನು ಈ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಜನರು ನೀಡಿದ್ದು ರಾಜಕೀಯವಾಗಿ ಇತಿಹಾಸ ಸೃಷ್ಟಿ ಅಂದರೆ ತಪ್ಪಾಗಲಿಕ್ಕಿಲ್ಲ. ರಾಜ್ಯದಲ್ಲಿಯೇ ಅತಿ ಹೆಚ್ಚು ಹಾಲುಮತ ಸಮುದಾಯದ ಮತದಾರರನ್ನು ಹೊಂದಿದ ಕೊಪ್ಪಳ ಲೋಕಸಭಾ ಕ್ಷೇತ್ರ ಎಂಬ ಲೆಕ್ಕಾಚಾರದ ಮೂಲಕ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ನೀಡಿ, ಅಂದು ಸೋಲನ್ನು ಕಾಣಲಿಲ್ಲ ಎಂದರೆ, ನಾನು ಈ ರಾಜ್ಯದ ಮುಖ್ಯಮಂತ್ರಿ ಆಗುತ್ತಿದ್ದಿಲ್ಲ ಎಂಬ ಮಾತುಗಳನ್ನು ಕೂಡಾ ಸ್ವತಃ ಸಿದ್ಧರಾಮಯ್ಯನವರು ಬಹಿರಂಗವಾಗಿ ಹೇಳಿಕೊಂಡಿರುವುದು ವಿಶೇಷ. ಆದರೆ, ಅಂದಿನ ಸೋಲಿನ ಕಹಿ ಕನಸಿನ ಮಧ್ಯೆಯೂ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಜನ ಸಿದ್ಧು ಅವರನ್ನು ಕೈಹಿಡಿದಿರುವುದಂತು ಎಂದಿಗೂ ಮರೆಯಲಾರದಂತದ್ದು. ಅಂದು ಸಿದ್ಧರಾಮಯ್ಯನವರಿಗೆ ಹೆಚ್ಚು ಮತಗಳನ್ನು ನೀಡಿರುವ ಸುದ್ದಿ ಮಾತ್ರ ಸಧ್ಯದ ರಾಜಕೀಯ ಚರ್ಚೆಯಲ್ಲಿ ಬಹಳಷ್ಟು ಮಹತ್ವವನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲ, ಕುಷ್ಟಗಿ ಸೇರಿದಂತೆ ರಾಜ್ಯಾದ್ಯಂತ ಇರುವ ‘ಸಿದ್ಧು’ ಅಭಿಮಾನಿಗಳು ತಮ್ಮ ನಾಯಕ ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದಲೇ ಈ ಬಾರಿ ಸ್ಪರ್ಧೆ ನೀಡಬೇಕು ಎಂಬ ಕೂಗೂ ಕೂಡಾ ಸಾಕಷ್ಟು ಕೇಳಿಬರುತ್ತಿದೆ..!!

ಸಿದ್ಧರಾಮಯ್ಯನವರು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾಗ ಇಲ್ಲಿನವರು ಅವರನ್ನು ಹೆಚ್ಚು ಬೆಂಬಲಿಸಿದ್ದರು. ಆಗ ರಾಯಚೂರು ಜಿಲ್ಲಾ ಪರಿಷತ್ ಸದಸ್ಯನಾಗಿದ್ದೆ.

ಕೆ.ಶರಣಪ್ಪ ಮಾಜಿ ಶಾಸಕರು, ಕುಷ್ಟಗಿ.