ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಗುಡ್ಡದ ದೇವಲಾಪೂರ ಗ್ರಾಮದ ಮೃತ ಸ್ವಾತಂತ್ರ್ಯ ಯೋಧ ಬೈಲಪ್ಪ ನಾಯ್ಕರ್ ಎಂಬುವರ ಧರ್ಮ ಪತ್ನಿ ಫಕೀರಮ್ಮ ಬೈಲಪ್ಪ ನಾಯ್ಕರ್ ನಮ್ಮನ್ನ ಅಗಲಿದ್ದಾರೆ..!
ಸದಾ ಸಮಾಜಮುಖಿಯಾಗಿದ್ದ ಫಕೀರಮ್ಮ ನಾಯ್ಕರ್ ಗ್ರಾಮದವರಿಗೆ ಬಹಳಷ್ಟು ಬೇಕಾದವರು. ಧಾರ್ಮಿಕ ಕಾರ್ಯಗಳಿಗೆ ದಾನ ಧರ್ಮಕ್ಕೆ ಹೆಸರಾದ ಫಕೀರಮ್ಮ ನಮ್ಮನ್ನ ಅಗಲಿರುವುದು ಬಹಳಷ್ಟು ನೋವಾಗಿದೆ ಎಂದು ಅವರ ಮೊಮ್ಮಗ ಚಂದ್ರು ಸಾಂತಗೇರಿ ಮನದಾಳದ ಮಾತುಗಳನ್ನು ಪತ್ರಿಕೆಗೆ ಹಂಚಿಕೊಂಡರು. ಮೃತರು ಇಬ್ಬರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಅಲ್ಲದೆ ಮೊಮ್ಮಕ್ಕಳು ಹಾಗೂ ಅಪಾರ ಬಳಗ ಅಗಲಿದ್ದಾರೆ..!!