ಕಳ್ಳನ ಬಂಧನ : 80 ಗ್ರಾಂ ಬಂಗಾರ ವಶ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಪೊಲೀಸರು ಕುಖ್ಯಾತ ಕಳ್ಳನನ್ನು ಬಂಧಿಸುವ ಮೂಲಕ 4 ಲಕ್ಷ ರೂಪಾಯಿಗಳ ಮೌಲ್ಯದ 80 ಗ್ರಾಮ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ..!

ಜಿಲ್ಲೆಯ ಕನಕಗಿರಿ ನಿವಾಸಿ ಹನುಮೇಶ ಬಸಪ್ಪ ಭಜಂತ್ರಿ (21) ಬಂಧಿತ ಆರೋಪಿ.
ಗಂಗಾವತಿ ನಗರ ಠಾಣೆಯ 4 ಹಾಗೂ ಯಲಬುರ್ಗಾ ಠಾಣೆಯ ಪ್ರತ್ಯೇಕ 2 ಪ್ರಕರಣಗಳಲ್ಲಿ ಪೊಲೀಸರಿಗೆ ಆರೋಪಿ ಬೇಕಾಗಿದ್ದ ಎಂದು ತಿಳಿದುಬಂದಿದೆ. ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದ್ದಾರೆ.

ಗಾಂಜಾ ವಶ :