ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾನಸ ಪುತ್ರನೆಂದು ಕರೆಯಲ್ಪಡುವ ಕನಕಗಿರಿ ಶಾಸಕ ಬಸವರಾಜ ದಡೆಸ್ಗೂರು ಅವರಿಗೆ ಈ ಭಾರಿ ಟಿಕೇಟ್ ಸಿಗುವ ಲಕ್ಷಣಗಳು ಕಾಣುತ್ತಿಲ್ಲವಾಗಿವೆ..!?
ಬಿಜೆಪಿ ಹಾಲಿ ಶಾಸಕರ ಪೈಕಿ ದಡೆಸ್ಗೂರು ಅವರಿಗೆ ಟಿಕೇಟ್ ಕೈ ತಪ್ಪುವುದರಲ್ಲಿ ದಡೆಸ್ಗೂರು ಅವರ ಹೆಸರು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಮಹಿಳಾ ಅಧಿಕಾರಿಯೊಬ್ಬರ ಜೊತೆಗೆ ನಡೆದಿದೆ ಎನ್ನಲಾದ ಇತ್ತೀಚಿಗೆ ಹರಿದಾಡಿದ ವಿಡಿಯೋ, ಆಡಿಯೋ ತುಣುಕುಗಳು ಟಿಕೇಟ್ ಕೈ ತಪ್ಪಲು ಪ್ರಮುಖ ಕಾರಣ ಎಂಬ ಮಾತುಗಳು ಕಮಲ ಪಾಳೆಯದಲ್ಲಿ ಗುಟ್ಟಾಗಿ ಉಳಿದಿಲ್ಲ. ದಡೆಸ್ಗೂರು ಅವರಿಗೆ ಒಂದು ವೇಳೆ ಟಿಕೇಟ್ ಕೈ ತಪ್ಪಿದರೆ, ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂಬ ಸಂದೇಶವನ್ನು ಅವರ ಅಭಿಮಾನಿಗಳು ಈಗಾಗಲೇ ನೀಡಿದ್ದಾಗಿದೆ. ಅಲ್ಲದೆ, ಕಾಂಗ್ರೆಸ್ ಅಭ್ಯರ್ಥಿಗೆ ಪಕ್ಕಾ ಪೈಟ್ ನೀಡುವರು ದಡೆಸ್ಗೂರು ಅವರು ಕ್ಷೇತ್ರದಲ್ಲಿ ಒಬ್ಬರೆ ಆದಕಾರಣ ಇವರಿಗೆ ಟಿಕೇಟ್ ನೀಡಲೇಬೇಕು ಎಂಬ ವಾದವನ್ನು ಕಾರ್ಯಕರ್ತರು ಪಕ್ಷದ ಮುಖಂಡರಿಗೆ ಮನದಟ್ಟು ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ‘ಅಪ್ಪಾಜಿ’ ಎಂತಲೇ ಕರೆಯುತ್ತಿದ್ದ ಬಸವರಾಜ ದಡೆಸ್ಗೂರು ಅವರು ಈ ಭಾರಿಯ ಟಿಕೇಟ್ ಗಿಟ್ಟಿಸಿಕೊಳ್ಳುವಲ್ಲಿ ಯಾವ ರೀತಿಯಲ್ಲಿನ ಒತ್ತಡ ತರಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ..!