ಕೊಪ್ಪಳ ಬಿಜೆಪಿ ಟಿಕೇಟ್ ಮಂಜುಳಾ ಅಮರೇಶ ಕರಡಿ ಅವರಿಗೆ ಪೈನಲ್..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ರಾಜಕೀಯವಾಗಿ ಬಹಳಷ್ಟು ಕುತೂಹಲ ಕೆರಳಿಸಿದ್ದ ಕೊಪ್ಪಳ ಅಸೆಂಬ್ಲಿ ಟಿಕೇಟ್ ಸಂಸದ ಸಂಗಣ್ಣ ಕರಡಿ ಅವರ ಸೊಸೆ ಮಂಜುಳಾ ಅಮರೇಶ ಕರಡಿ ಅವರಿಗೆ ಪೈನಲ್ ಆಗಿರುವುದು ವಿಶೇಷ..!

ಸುಮಾರು ದಿನಗಳಿಂದ ಅಳೆದು, ತೂಗಿದ ಬಿಜೆಪಿ ಹೈಕಮಾಂಡ್ ಕೊನೆಗೂ ಸಂಸದ ಸಂಗಣ್ಣ ಕರಡಿ ಅವರ ಹಿರಿಯ ಮಗ ಅಮರೇಶ ಅವರ ಪತ್ನಿ ಮಂಜುಳಾ ಕರಡಿ ಅವರಿಗೆ ಹಗ್ಗ ಜಗ್ಗಾಟದ ಮಧ್ಯೆ ಟಿಕೇಟ್ ನೀಡಿದೆ. ಬಿಜೆಪಿ ರಾಷ್ಟ್ರೀಯ ಪರಿಷತ್ತ ಮಾಜಿ ಸದಸ್ಯ ಸಿ.ವಿ.ಚಂದ್ರಶೇಖರ ಅವರು ಟಿಕೇಟಗಾಗಿ ಬಹಳಷ್ಟು ಪೈಪೋಟಿ ನಡೆಸಿದ್ದರು. ಜೊತೆಗೆ ಡಾ.ಬಸವರಾಜ, ಗವಿಸಿದ್ಧಪ್ಪ ಕರಡಿ, ಅಮರೇಶ ಕರಡಿ ಸೇರಿದಂತೆ ಅನೇಕ ಮುಖಂಡರ ಹೆಸರುಗಳು ಕೇಳಿ ಬಂದಿದ್ದವು. ಕೊಪ್ಪಳ ಟಿಕೇಟ್ ಸುದ್ದಿ ರಾಷ್ಟ್ರ ಮಟ್ಟದಲ್ಲಿಯೂ ಚರ್ಚೆ ನಡೆದಿತ್ತು ಅಂದರೆ ತಪ್ಪಾಗಲಿಕ್ಕಿಲ್ಲ. ಕೊಪ್ಪಳ ಸೇರಿದಂತೆ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಸಂಸದ ಕರಡಿಯವರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ಕೇಳಿಬಂದಿದೆ..!!