ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಉಮೇದುವಾರಿಕೆ ಬಯಸಿ ಜೆಡಿಎಸ್ ಪಕ್ಷದಿಂದ ಇಬ್ಬರು ಮುಖಂಡರು ನಾಮಪತ್ರ ಸಲ್ಲಿಸಿದ್ದಾರೆ..!
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಕುಂಬಾರ ಹಾಗೂ ನಿಯೋಜಿತ ಅಭ್ಯರ್ಥಿ ತುಕಾರಾಮ್ ಸೂರ್ವೇ ಎಂಬ ಇಬ್ಬರು ಮುಖಂಡರು ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಇವರಲ್ಲಿ ಯಾರಿಗೆ ಪಕ್ಷ ‘ಬಿ’ ಪಾರಂ ನೀಡಲಿದೆ ಎಂಬುದು ಗಮನಾರ್ಹ. ಇಲ್ಲಿಯವರೆಗೂ 8 ಜನ ಅಭ್ಯರ್ಥಿಗಳಿಂದ 11 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾ ಅಧಿಕಾರಿ ಚಿದಾನಂದಪ್ಪ ಪತ್ರಿಕೆಗೆ ಸ್ಪಷ್ಟಪಡಿಸಿದರು..!!