ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ವಂಚಿತ ಹಿರಿಯ ಮುಖಂಡ ಸಿ.ವಿ ಚಂದ್ರಶೇಖರ ಅವರ ಮುಂದಿನ ನಡೆ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ..!
ಈ ಬಾರಿ ಕಮಲದ ಟಿಕೇಟ್ ನನಗೆ ಪಕ್ಕಾ ಎಂದು ಹೇಳಿಕೊಂಡು ಕಳೆದು ಐದು ವರ್ಷಗಳಿಂದ ಇಡೀ ಕ್ಷೇತ್ರದ ತುಂಬೆಲ್ಲಾ ಸಂಘಟನೆಯಲ್ಲಿ ತೊಡಗಿದ್ದ ಸಿವಿಸಿಗೆ ಟಿಕೇಟ್ ಸಿಗದೇ ತೀವ್ರ ಅಘಾತವಾಗಿದೆ. ಪಕ್ಷದ ಎಲ್ಲಾ ಜವಾಬ್ದಾರಿ ಹೊತ್ತು ತನು, ಮನ, ಧನದ ಮೂಲಕ ಪ್ರಾಮಾಣಿಕ ಸೇವೆಯಲ್ಲಿದ್ದ ಪಕ್ಷದ ನಿಷ್ಠೆ ಎಲ್ಲೋ ಒಂದು ಕಡೆ ಮರ ಮೊಸಕ್ಕೆ ಕಾರಣವಾಗಿತೇ.. ಎಂಬ ಅಭಿಪ್ರಾಯಗಳು ಕೂಡ ಅವರ ಆಪ್ತವಲಯದಲ್ಲಿ ಕೇಳಿಬರುತ್ತಿವೆ. ಟಿಕೇಟ್ ನನಗೆ ಸಿಕ್ಕೇ ಸಿಗುತ್ತದೆ ಎಂದು ಹೇಳಿಕೊಂಡು, ಪಕ್ಷ ಸಂಘಟನೆಯ ಹೆಸರಿನಲ್ಲಿ ಪ್ರಚಾರ, ದಾನ, ಧರ್ಮ, ಕಾಣಿಕೆ ಹಾಗೂ ಪಟ್ಟಿ ಇತ್ಯಾದಿಗಳನ್ನು ನೀಡುವುದರ ಮೂಲಕ ಎಲ್ಲಾ ಖಾಲಿ ಮಾಡಿಕೊಂಡ ಸಿವಿಸಿ ಅವರಿಗೆ ಇತ್ತ ಟಿಕೇಟ್ ಇಲ್ಲ.. ಅತ್ತ ಗಳಿಸಿದ್ದ ಹಣ ಕೂಡಾ ಕಳೆದುಕೊಂಡು ದಿಕ್ಕು ದೊಚದಂತಿರುವ ಪರಿಸ್ಥಿತಿಯಲ್ಲಿದ್ದಾರೆ. ಆದರೆ, ಸುಮಾರು ಹತ್ತು ವರ್ಷಗಳ ಕಾಲ ರಾಜಕಾರಣದಲ್ಲಿ ಯಾವುದೇ ತರಹದ ರಾಜಕೀಯವಾಗಿ ಅಧಿಕಾರವನ್ನು ಇವರು ಅನುಭವಿಸಲಿಲ್ಲ ಎಂಬ ಕೊರಗು ಮಾತ್ರ ಇವರನ್ನು ಮೂಕ ವಿಸ್ಮಯರನ್ನಾಗಿಸಿದೆ. ಟಿಕೇಟ್ ನೆಪದಲ್ಲಿ ಹೆಸರು ಹೇಳಲು ಇಚ್ಚಿಸಿದ ಪಕ್ಷದ ಹಿರಿಯ ನಾಯಕರು ಯಾವುದೇ ಕುತಂತ್ರ ಗೊತ್ತಿರದ ಈ ಅಮಾಯಕ ಸಿವಿಸಿಯನ್ನು ಸುಲಿದುಬಿಟ್ಟಿದ್ದಾರೆ ಎಂಬ ಮಾತುಗಳು ಕೂಡಾ ಕ್ಷೇತ್ರದಲ್ಲಿ ಹರಿದಾಡುತ್ತಿವೆ. ಈ ಎಲ್ಲಾ ಘಟನೆಗಳಿಂದ ಸಿ.ವಿ ಚಂದ್ರಶೇಖರ ಅವರನ್ನು ನತದೃಷ್ಟ ರಾಜಕಾರಣಿ ಎಂದು ಬಣ್ಣಿಸಲಾಗುತ್ತಿದೆ.
ಜೆಡಿಎಸ್ ಸೇರ್ಪಡೆ :
ಈಗಾಗಲೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಸಿವಿಸಿ ಅವರು ಪಕ್ಷೇತರಾಗಿ ಸ್ಪರ್ಧೆ ನೀಡುತ್ತಾರಾ.. ಅಥವಾ ದಳಪತಿಗಳ ಜೊತೆಗೆ ಕೈ ಜೊಡಿಸುವ ಮೂಲಕ ನೀರಿಲ್ಲದೆ ಬತ್ತುತ್ತಿರುವ ಹುಲ್ಲಿಗೆ ನೀರನ್ನೇರಿಯುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ..!!