ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿಯಲ್ಲಿಂದು ಜರುಗಿದ ಬಿಜೆಪಿ ಶಕ್ತಿ ಪ್ರದರ್ಶನದ ಮೆರವಣಿಗೆಯಲ್ಲಿ ಭಾಗಿಯಾದ ಲೋಕಸಭಾ ಸದಸ್ಯ ಸಂಗಣ್ಣ ಕರಡಿ ಅವರು ಭಾಗವಹಿಸುವ ಮೂಲಕ ಸಾವಿರಾರು ಜನ ಕಾರ್ಯಕರ್ತರ ಪಡೆಗೆ ಮತ್ತಷ್ಟು ಬಲ ತುಂಬಿದ ಪ್ರಸಂಗ ಜರುಗಿತು..!
ಅಪಾರ ಕಾರ್ಯಕರ್ತರ ಪಡೆಯೊಂದಿಗೆ ಬಿಜೆಪಿ ಮೆರವಣಿಗೆಯೂ ಬಹಳಷ್ಟು ಅದ್ಧೂರಿಯಾಗಿ ಜರುಗಿತು. ಪಟ್ಟಣದ ಅಡವಿರಾಯ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯ ಸಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಮಲ ಬಾವುಟಗಳ ಕಲರವ ಎದ್ದು ಕಾಣುತ್ತಿತ್ತು. ತೆರೆದ ಲಾರಿಯಲ್ಲಿ ಕಿಕ್ಕಿರಿದು ತುಂಬಿದ ನಾಯಕರನ್ನು ಹೊತ್ತು ತಂದು, ಶ್ರೀ ಬಸವೇಶ್ವರ ವೃತ್ತದಲ್ಲಿ ಕೆಲ ಸಮಯ ಅಭ್ಯರ್ಥಿ ಸೇರಿದಂತೆ ಪ್ರಮುಖ ನಾಯಕರು ಬಿಜೆಪಿ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿಕೊಂಡರು. ಮೆರವಣಿಗೆ ಬಸವೇಶ್ವರ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಸಂಗಣ್ಣ ಕರಡಿ ಭಾಗವಹಿಸಿ, ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲವು ಆಗಬೇಕು. ತಳಮಟ್ಟದಿಂದ ಭಾರತೀಯ ಜನತಾ ಪಕ್ಷದ ಸರಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡುವ ಮೂಲಕ ಬೆಂಬಲಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡರು. ಈ ಬಾರಿ ಸ್ಥಳೀಯರಿಗೆ ಅವಕಾಶ ನೀಡಬೇಕು. ಹೊರಗಿನವರಿಗೆ ಮತ ನೀಡಬಾರದು ಎಂದು ಕಟ್ಟಪ್ಪಣೆ ಮಾಡಿದ ಪ್ರಸಂಗ ಜರುಗಿತು..!!