ಜನಸ್ತೋಮದೊಂದಿಗೆ ಬಯ್ಯಾಪೂರು ನಾಮಪತ್ರ ಸಲ್ಲಿಕೆ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಈ ಬಾರಿ ಗೆಲುವು ಖಚಿತ ಆಗಲಿದೆ. ಈ ಮೂಲಕ ಮತದಾರ ಪ್ರಭುಗಳು ಕುಷ್ಟಗಿಯಲ್ಲಿನ ಪಾರಂಪರಿಕ ಇತಿಹಾಸ ಅಳಿಸಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಮರೇಗೌಡ ಪಾಟೀಲ ಬಯ್ಯಾಪೂರು ಅಭಿಪ್ರಾಯವ್ಯಕ್ತಪಡಿಸಿದರು..!

ಅಪಾರ ಕಾರ್ಯಕರ್ತರ ಮತ್ತು ಅಭಿಮಾನಿಗಳ ಜನಸ್ತೋಮದೊಂದಿಗೆ ತಹಸೀಲ್ದಾರ ಕಚೇರಿಗೆ ಆಗಮಿಸಿ, ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಇನ್ನೊಂದು ಬಾರಿ ಶಾಸಕನಾಗಲು ಅವಕಾಶ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು. ಅಲ್ಲದೆ, ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನೊಂದು ಸಾರಿ ಗೆಲುವಿನ ನಂಬಿಕೆ ಇದೆ. ಇತ್ತೀಚಿಗೆ ಪಕ್ಷ ಸೇರ್ಪಡೆಗೊಂಡಿರುವ ಬಿಜೆಪಿಯ ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿಯವರನ್ನು ಕ್ಷೇತ್ರಕ್ಕೆ ಕರೆಯಿಸಿ, ಹನುಮಸಾಗರದಲ್ಲಿ ಕಾರ್ಯಕ್ರಮ ಏರ್ಪಡಿಸಬೇಕು ಎಂಬ ಪ್ಲಾನ್ ಇದೆ ಎಂದರು..!!