ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜೆಡಿಎಸ್ ಅಭ್ಯರ್ಥಿ ಸಿ.ವಿ.ಚಂದ್ರಶೇಖರ ನಾಮಪತ್ರ ಸಲ್ಲಿಸುವ ಮುನ್ನ ಗವಿಮಠಕ್ಕೆ ಭೇಟಿ ನೀಡಿ, ಶ್ರೀ ಗವಿಸಿದ್ಧೇಶ್ವರಮಹಾಸ್ವಾಮಿಗಳ ಆಶೀರ್ವಾದ ಪಡೆಯುವ ಸಂದರ್ಭದಲ್ಲಿ ಸಿವಿಸಿ ಸೇರಿದಂತೆ ಧರ್ಮ ಪತ್ನಿ ಇಬ್ಬರು ಕಣ್ಣೀರು ಹಾಕಿದ ಪ್ರಸಂಗ ಜರುಗಿತು. ಗವಿಶ್ರೀಗಳು ಆಶೀರ್ವದಿಸಿದರು. ಅಲ್ಲಿಯೇ ಉಪಸ್ಥಿತರಿದ್ದ ಗುತ್ತಿಗೆದಾರ ಸುರೇಶ ಭೂಮರಡ್ಡಿ ಅವರು ದಂಪತಿಗಳಿಬ್ಬರನ್ನು ಸಮಾಧಾನಪಡಿಸಿದರು.
ಜನಸಾಗರದೊಂದಿಗೆ ನಾಮಪತ್ರ ಸಲ್ಲಿಕೆ : ಇತ್ತೀಚೆಗೆ ಬಿಜೆಪಿ ತ್ಯಜಿಸಿ ಜೆಡಿಎಸ್ ಸೇರಿದ ಸಿವಿಸಿ ಅವರು ಜೆಡಿಎಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಅಪಾರ ಅಭಿಮಾನಿಗಳ ಮೂಲಕ ಇಂದು ನಾಮಪತ್ರ ಸಲ್ಲಿಸಿದರು. ಗವಿಮಠದ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಿತು. ಕಳೆದ 9 ವರ್ಷಗಳಿಂದ ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿದ್ದೇನೆ. ಬಿಜೆಪಿಯಲ್ಲಿನ ಅಪಾರ ಜನ ಕಾರ್ಯಕರ್ತರು ಈಗಾಗಲೇ ಜೆಡಿಎಸ್ ಪಕ್ಷ ಸೇರುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಕೊಪ್ಪಳ ಕ್ಷೇತ್ರದ ಜನರ ನಾಡಿ ಮಿಡಿತ ನನಗೆ ಬಹಳಷ್ಟು ಅರಿವು ಇರುವುದರಿಂದ ಗೆಲುವು ನಿಶ್ಚಿತ. ಪಕ್ಷದ ಪಂಚರತ್ನ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುವೆ ಎಂದರು..!!