80 ಕೋಳಿ ವಶಪಡಿಸಿಕೊಂಡ ಚುನಾವಣಾ ಅಧಿಕಾರಿಗಳು..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ವಿಧಾನ ಕ್ಷೇತ್ರದ ಮಡಿಕೇರಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಬಾಡೂಟಕ್ಕಾಗಿ ವಿತರಿಸಲು ಕರೆ ತಂದಿದ್ದ 80 ಕೋಳಿಗಳನ್ನು ವಶಪಡಿಕೊಂಡು, ವ್ಯಕ್ತಿವೊಬ್ಬರ ಮೇಲೆ ಚುನಾವಣಾ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ..!

ಕೆ.ಎ 29 ಸಿ 1729 ವಾಹನ ಚಾಲಕ ಮಡಿಕೇರಿ ಗ್ರಾಮದ ಶರಣಗೌಡ ರಾಮನಗೌಡ ಪಾಟೀಲ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ. (ಗುನ್ನೆ ನಂ 48/2023) ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಕಲಂ‌ 171 (ಇ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..!!