ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಬಾಗಲಕೋಟೆ : ಜಿಲ್ಲೆಯ ಹುನಗುಂದ ತಾಲ್ಲೂಕಿನ ಸಿದ್ಧನಕೊಳ್ಳ ಹಾಗೂ ಬೆನಕನವಾರಿ ಸಮೀಪದ ಸಿದ್ಧನಕೊಳ್ಳದ ಸುಪ್ರಸಿದ್ಧ ಪುಣ್ಯಕ್ಷೇತ್ರ ಮತ್ತು ಕಲಾ ಪೋಷಕ ಮಠದಲ್ಲಿ (ಮಾರನಬಸರಿ) ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ 48 ನೇ ವರ್ಷದ ಪುಣ್ಯಾರಾಧನೆಯ ವಿಶೇಷ ಕಾರ್ಯಕ್ರಮವನ್ನು ದಿನಾಂಕ 26-04-2023 ರಂದು ಹಮ್ಮಿಕೊಳ್ಳಲಾಗಿದೆ..!
ನೆಲಿವಿಗಿಯ ಶ್ರೀ ಬಸಲಿಂಗಯ್ಯ ಹಿರೇಮಠ ಇವರಿಂದ ಪೂಜ್ಯ ಲಿಂ.ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳರವರ ಕತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗುಲಿವೆ. ಬಳಿಕ ಧರ್ಮಸಭೆ, ಉಪನ್ಯಾಸ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಚಳಗೇರಿ ಮಹಾಸ್ವಾಮಿಗಳ ಸೇರಿದಂತೆ ವಿವಿಧ ಮಠಗಳ ಹರಗುರು ಶ್ರೀಗಳ ಸಾನಿಧ್ಯದಲ್ಲಿ ಪುಣ್ಯಾರಾಧನೆ ಜರಗುವುದು ಎಂದು ಮಠದ ಪರಮಪೂಜ್ಯ ಶ್ರೀಗಳಾದ ಡಾ.ಶಿವಕುಮಾರ ಮಹಾಸ್ವಾಮಿಗಳು ಪತ್ರಿಕೆಗೆ ತಿಳಿಸಿದ್ದಾರೆ..!!