ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಡಲಗೇರಿ ಗ್ರಾಮದ ಪ್ರತ್ಯೇಕ ಜಮೀನುಗಳಲ್ಲಿ ಮಹಿಳೆ ಸೇರಿದಂತೆ 6 ಕುರಿಗಳು ಸಿಡಿಲಿಗೆ ಬಲಿಯಾಗಿವೆ..!
ಶಾಂತಮ್ಮ ದುರಗಪ್ಪ ಕಮತರ (65) ಸಿಡಿಲು ಬಡಿದು ಮೃತಪಟ್ಟಿರುವ ನತದೃಷ್ಟ ಮಹಿಳೆ. ಫಕೀರಸಾಬ್ ನೈನಾಪೂರು (36), ರಮಜಾನಬೀ ನೈನಾಪೂರು (10) ಹಾಗೂ ಶಿವು ಬಸವಂತಪ್ಪ ಆರಿ (28) ಸಿಡಿಲಿನ ರಭಸಕ್ಕೆ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹನುಮನಾಳ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಫಕೀರಸಾಬ್ ನೈನಾಪೂರು ಅವರಿಗೆ ಸೇರಿದ 5 ಕುರಿಗಳು 1 ಟಗರು ಸಾವನ್ನಪ್ಪಿದರ ಬಗ್ಗೆ ವರದಿಯಾಗಿದೆ. ಭಾರಿ ಗಾಳಿವೊಂದಿಗೆ ಆರಂಭವಾದ ಮಳೆಯಲ್ಲಿ ಸಿಡಿಲು ಬಡಿದಿದೆ ಎಂದು ಪತ್ರಿಕೆಗೆ ಗ್ರಾಮಸ್ಥರು ತಿಳಿಸಿದ್ದಾರೆ..!!
ತಹಸೀಲ್ದಾರ ಭೇಟಿ : ಕುಷ್ಟಗಿ ತಹಸೀಲ್ದಾರ ರಾಘವೇಂದ್ರ ಕೆ, ಹನುಮನಾಳ ಕಂದಾಯ ನಿರೀಕ್ಷಕ ಅಬ್ದುಲ್ ರಜಾಕ್, ವಿ.ಎ ಪ್ರಸನ್ನ ಕುಲಕರ್ಣಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಗ್ರಾಮಸ್ಥರು ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿದರು.
ಭೇಟಿ : ತುಗ್ಗಲದೊಣಿ ಗ್ರಾಮ ಪಂಚಾಯಿತಿ ಆಧ್ಯಕ್ಷ ಶಿವರಾಜ ಬೆಣ್ಣಿ ಸೇರಿದಂತೆ ಸದಸ್ಯ ಅಯ್ಯಪ್ಪ ನಸಗುನ್ನಿ ಮುಖಂಡರಾದ ಶರಣಪ್ಪ ಹರಿಜನ, ಹನುಮಂತ ಬನಹಟ್ಟಿ ಹಾಗೂ ಬಸಪ್ಪ ಪೂಜಾರ ಇನ್ನಿತರರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.