ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಫುಟ್ಬಾಲ್ ತಂಡದ ಕ್ಯಾಪ್ಟನ್ ಜನಾರ್ಧನರೆಡ್ಡಿ ತನ್ನ ತಂಡದ ಸದಸ್ಯನ ಆಯ್ಕೆಗಾಗಿ ಕುಷ್ಟಗಿಗೆ ಭೇಟಿ ನೀಡಲಿದ್ದಾರೆ..!?
16 ನೇ ಅಸೆಂಬ್ಲಿ ಕುತೂಹಲ ಪಂದ್ಯಾಟಕ್ಕೆ 224 ಜನ ಸದಸ್ಯರ ಆಯ್ಕೆಯ ಪೈಪೋಟಿ ಕದನದಲ್ಲಿ ತನ್ನ (ಕೆ ಆರ್ ಪಿ ಪಿ) ತಂಡಕ್ಕೆ ಕನಿಷ್ಠ ಸದಸ್ಯರು ಜಯಸಾಧಿಸಲೇಬೇಕೆಂದು ತಂಡದ ನಾಯಕ ಗಾಲಿ ಜನಾರ್ಧನರೆಡ್ಡಿ ಈಗಾಗಲೇ ಗಂಗಾವತಿಯಲ್ಲಿ ಪಣ ತೊಟ್ಟಿದ್ದಾಗಿದೆ. ನಿವೃತ್ತ ತಹಸೀಲ್ದಾರ ಸಿ.ಎಂ.ಹಿರೇಮಠ ಅವರು ರೆಡ್ಡಿ ತಂಡಕ್ಕೆ ಕುಷ್ಟಗಿಯಿಂದ ಆಯ್ಕೆ ಬಯಸಿದ್ದಾರೆ. ಅವರ ಆಯ್ಕೆಗೆ ಕುಷ್ಟಗಿ ರಾಜಕೀಯ ಫುಟ್ಬಾಲ್ ಕ್ರೀಡಾಂಗಣವು ಎಲ್ಲಾ ತರಹದ ಬಹು ಬೇಡಿಕೆಗಳೊಂದಿಗೆ ಮಧುವಣಗಿತ್ತಿಯಂತೆ ಸಜ್ಜಾಗಿದೆ. ಇವರ ಆಯ್ಕೆ ತಾಲೀಮಿಗೆ ತಾವರಗೇರಾ ಪಟ್ಟಣದಲ್ಲಿ ದಿನಾಂಕ 25-04-2023 ರಂದು ರೆಡ್ಡಿ ಅವರು ಶುಭ ಮುಹೂರ್ತದಲ್ಲಿ ಚಾಲನೆ ನೀಡಲಿದ್ದಾರೆ. ಇಲ್ಲಿನ ಪ್ರಬಲ ಎದುರಾಳಿಗಳಿಗೆ ಚೆಂಡಿನ ಹೊಡೆತ ಕೊಡಲು ಸೂಕ್ತ ವ್ಯಕ್ತಿಯಾಗಿ ‘ಲಿಂಗಾಯತ’ ಸಮುದಾಯದ ಅಭ್ಯರ್ಥಿಯನ್ನೇ ಆಯ್ಕೆಮಾಡಿಕೊಳ್ಳಲಾಗಿದೆ. ‘ಲಿಂಗಾಯತ’ ಸಮುದಾಯದ ಅತಿ ಹೆಚ್ಚು ಮತಗಳನ್ನು ಹೊಂದಿದ ಕುಷ್ಟಗಿ ಕ್ಷೇತ್ರದಲ್ಲಿ ಸಿಎಂ ಹಿರೇಮಠ ಅವರು ಫುಟ್ಬಾಲ್ ನೊಂದಿಗೆ ಹೇಗೆ ಆಟವಾಡಲಿದ್ದಾರೆ ಎಂಬುದನ್ನು ಇಲ್ಲಿನವರು ಎದುರು ನೋಡುತ್ತಿದ್ದಾರೆ. ಎಲ್ಲಾ ಮೂಲಗಳಿಂದ ಬೆಂಬಲಿಸುವ ಕ್ಯಾಪ್ಟನ್ ನನ್ನು ಹಿರೇಮಠ ಅವರು ಹೇಗೆ ಉಪಯೋಗಿಸಿಕೊಳ್ಳುವರು..? ಅಥವಾ ಶೂನ್ಯ ಗೊಲ್ ಗಳಿಂದ ಬ್ಯಾಕ್ ಟು ಫೆವಲೀನ್ ಆಗಲಿದ್ಧಾರೆಯೇ..? ಎಂಬ ಇತ್ಯಾದಿ ಚರ್ಚೆಗಳಂತು ಕ್ಷೇತ್ರದಲ್ಲಿ ಜೋರಾಗಿಯೇ ನಡೆಯುತ್ತಿವೆ. ರಾಷ್ಟ್ರೀಯ ಪಕ್ಷಗಳ ತಂಡದ ಇಬ್ಬರು ಪ್ರಬಲ ಎದುರಾಳಿಗಳೊಂದಿಗೆ ತಮ್ಮ (ಗಾಲಿ) ಚೆಂಡಿನೊಂದಿಗೆ ವಿಭಿನ್ನ ಡಿಫೆನ್ಸ್ ಕೌಶಲ್ಯಗಳ ಮೂಲಕ ಹಿರೇಮಠ ಅವರು ತಮ್ಮ 73 ವರ್ಷದ ಇಳಿವಯಸ್ಸಿನಲ್ಲಿ ಹೇಗೆ..? ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕ್ಷೇತ್ರದ ಮತದಾರ ಪ್ರಭುಗಳು ಸೂಕ್ಷ್ಮವಾದ ವಿಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಮೂಲತಃ ಗಣಿ ಹಣದಲ್ಲಿ ಆಗರ್ಭ ಶ್ರೀಮಂತನಾಗಿರುವ ಕ್ಯಾಪ್ಟನ್ ಜನಾರ್ಧನರೆಡ್ಡಿ ಅವರು ನೀಡುವ ಪ್ರಮುಖ ಸೌಲಭ್ಯ ದುರುಪಯೋಗ ಆಗಲಿದಿಯೇ ಎಂಬ ಚರ್ಚೆಗಳು ಕೂಡಾ ಕ್ಷೇತ್ರದಲ್ಲಿ ಜೋರಾಗಿಯೇ ನಡೆದಿವೆ. ಎಲ್ಲದ್ದಕ್ಕೂ ಮೇ 10 ರಂದು ಜರಗುವ (ಫುಟ್ಬಾಲ್) ರಾಜಕೀಯ ಪಂದ್ಯಾಟದಲ್ಲಿ ಹಿರಿಯ ಜೀವಿ ಸಿಎಂ ಹಿರೇಮಠ ಅವರು ಅಕ್ರಮಣಕಾರಿಯಾಗಿ ಪ್ರಿ ಕಿಕ್ ಮತ್ತು ಪೆನಾಲ್ಟಿ ಕಿಕ್ ಕೌಶಲ್ಯಗಳನ್ನು ಬಳಸಿಕೊಳ್ಳುವ ಮೂಲಕ ಕನಿಷ್ಟ ಪಕ್ಷ ಉತ್ತಮ ಆಟಗಾರನಾಗಿ ಕ್ಷೇತ್ರದಲ್ಲಿ ಹೊರಹೊಮ್ಮುತ್ತಾರಾ ಎಂಬುದನ್ನು ಕ್ಷೇತ್ರದ ಸಮಗ್ರ ಕ್ರೀಡಾಭಿಮಾನಿಗಳು ಕಾದು ನೋಡುತ್ತಿರುವುದಂತು ಸತ್ಯ..!?