ಚೆಕ್ ಪೋಸ್ಟ್ ನಲ್ಲಿ 1,90,000=00 ಹಣ ವಶ

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 1,90,000=00 ಹಣವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪಾ ಚೆಕ್ ಪೊಸ್ಟ್ ನಲ್ಲಿ ನಡೆದಿದೆ..!

ಶ್ರೀ ಕಾಕುಲಮ್ SPC ಇನ್ ಪ್ರಾ ಕಂಪನಿ ಸೂಪರ್ ವೈಜರ್ ಆಗಿರುವ ಶ್ರೀನಿವಾಸ್ ರಾವ್ ತಂದೆ ಅಪ್ಪ ರಾವ್ ಎಂಬುವರು ಬಸ್ಸಿನಲ್ಲಿ ಹಣ ಸಾಗಿಸುತ್ತಿದ್ದಾಗ ಚೆಕ್’ಪೋಸ್ಟ್ ತನಿಖಾಧಿಕಾರಿ ಹಾಗೂ ಪೊಲೀಸರು ಪರಿಶೀಲನೆ ನಡೆಸಿ, ಹಣಕ್ಕೆ ಯಾವುದೇ ದಾಖಲೆಗಳಿರದ ಹಿನ್ನಲೆಯಲ್ಲಿ ಹಣ ವಶಕ್ಕೆ ಪಡಿಸಿಕೊಳ್ಳಲಾಗಿದೆ. ಸಂಬಂಧಿಸಿದ ವ್ಯಕ್ತಿಯ ಮೇಲೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..!!