ನೊಗಕ್ಕೆ ಎತ್ತಾದ ರೈತ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಎತ್ತುಗಳಲ್ಲಿದ ರೈತನೊಬ್ಬ ನೊಗಕ್ಕೆ ಎತ್ತು ಆಗಿರುವುದು ವಿಶೇಷ..!

ಇಂತಹ ವಿಭಿನ್ನ ದೃಶ್ಯ ಕುಷ್ಟಗಿಯಿಂದ ಕೊಪ್ಪಳಕ್ಕಿರುವ ರಾಜ್ಯ ಹೆದ್ದಾರಿಗೆ ಹತ್ತಿಕೊಂಡಿರುವ ನೆರೆಬೆಂಚಿ ಗ್ರಾಮದ ಜಮೀನೊಂದರಲ್ಲಿ ಕಂಡು ಬಂದಿತು. ತೋಟಯ್ಯ ವೀರಯ್ಯ ಹಿರೇಮಠ ಎತ್ತುಗಳ ನೊಗಕ್ಕೆ ಹೆಗಲು ಕೊಟ್ಟಿರುವ ರೈತ. ತನಗಿರುವ 31 ಗುಂಟೆ ಜಮೀನಿನ ಉಳುಮೆ ಸೇರಿದಂತೆ ಸಣ್ಣ ಪುಟ್ಟ ಕೃಷಿ ಚಟುವಟಿಕೆಗಳಿಗೆ ಯಾವತ್ತಿಗೂ ಈ ರೈತ ಕುಟುಂಬ ಎತ್ತುಗಳನ್ನು ಬಳಸಿಲ್ಲ. ನೊಗಕ್ಕೆ ಪತಿ ಹೆಗಲಕೊಟ್ಟರೇ.. ಮಡದಿ ಮೇಳಿಯ ಜವಾಬ್ದಾರಿ ಹೊರುತ್ತಾಳೆ. ಗಂಡ ಹೆಂಡತಿ ಸೇರಿಕೊಂಡು ಜಮೀನಿನಲ್ಲಿರುವ ಕಳೆಯನ್ನು ಪಿಳಗುಂಟೆ ಮೂಲಕ ಸಲೀಸಾಗಿ ಕಳೆಯುತ್ತಾರೆ. ಕಡುಬಡತನದಲ್ಲಿರುವ ಈ ಕುಟುಂಬಕ್ಕೆ ಜೊಡೆತ್ತುಗಳಿಲ್ಲ. ದುಬಾರಿ ಬೆಲೆ ಎತ್ತುಗಳನ್ನು ಖರೀದಿಸಲು ಈ ಕುಟುಂಬಕ್ಕೆ ಇವತ್ತಿಗೂ ಸಾಧ್ಯವಾಗಿಲ್ಲ. ಬಡ ಕುಟುಂಬದ ನೆರೆವಿಗೆ ಕೃಷಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವ ಕುಟುಂಬಕ್ಕೆ ನೆರವಿನ ಸಹಾಯಹಸ್ತ ಬೇಕಾಗಿದೆ ಎಂಬುದು ‘ಕೃಷಿ ಪ್ರಿಯ’ ಪತ್ರಿಕೆಯ ಒತ್ತಾಸೆಯಾಗಿದೆ..!!