ಕುಷ್ಟಗಿಯಲ್ಲಿ ‘ಕಾವೇರಿ 2.0’ ತಂತ್ರಾಂಶಕ್ಕೆ ಚಾಲನೆ..!

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೂತನ 2.0 ತಂತ್ರಾಂಶಕ್ಕೆ ಗುಲಬರ್ಗಾ ವಿಭಾಗದ ನೊಡಲ್ ಆಫೀಸರ್ ಮೊಹಮ್ಮದ್‌ ಹಸೀಬ್ ಚಾಲನೆ ನೀಡಿದರು..!

ನೋಂದಣಿ ಮತ್ತು ಮುದ್ರಾಂಕ ಇಲಾಖೆ ವಿನೂತನ ಬದಲಾವಣೆ ಕಾರ್ಯಕ್ರಮಗಳಲ್ಲಿ ಒಂದಾಗಿರುವ “ಕಾವೇರಿ 2.0” ಎಂಬ ನೂತನ ತಂತ್ರಾಂಶವು ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ. ಈಗಾಗಲೇ ರಾಜ್ಯದ ಸುಮಾರು ನೋಂದಣಿ ಕಚೇರಿಗಳಲ್ಲಿ ಈ ವಿನೂತ ತಂತ್ರಾಂಶ ಜಾರಿಗೆ ತರಲಾಗಿದೆ. ಆದರೆ, ಜಿಲ್ಲೆಯ ಕುಷ್ಟಗಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ದಿನಾಂಕ 27-04-2023 ರಂದು ವಿಶೇಷ ಯೋಜನೆ ಜಾರಿಗೆ ತರಲು ಮೊದಲೇ ಇಲಾಖೆ ದಿನಾಂಕ ನಿಗದಿಪಡಿಸಲಾಗಿತ್ತು. ನಿಗದಿಯಂತೆ ಇಂದು ತಂತ್ರಾಂಶ ಜಾರಿಗೆ ಬರಲಾಗಿದೆ. ಇನ್ನೂ ಯಾವುದೇ ಆಸ್ತಿಗಳ ಖರೀದಿ, ಸೇರಿದಂತೆ ಇಸಿ ಪ್ರಮಾಣ ಪತ್ರಗಳನ್ನು ಪಡೆಯಲು ಇನ್ನೂ ಕಚೇರಿಗೆ ಅಲೆದಾಡುವಂತಿಲ್ಲ. ಇಲಾಖೆ ವೆಬ್ ಗೆ ಲಾಗೀನ್ ಆಗುವ ಮೂಲಕ ಸ್ಲಾಟ್ ಪಡೆದುಕೊಂಡು ಉಪ ನೋಂದಣಾಧಿಕಾರಿಗಳ ಭೇಟಿ ಬಳಿಕ ಕಚೇರಿವೊಂದಿಗೆ ವ್ಯವಹರಿಸಲು ಈ ತಂತ್ರಾಂಶ ಬಹಳಷ್ಟು ಸೂಕ್ತವಾಗಿದೆ. ಖರೀದಿ ವ್ಯವಹಾರಗಳಿಗೆ ದಿನಾಂಕ, ಸಮಯ ನಿಗದಿಯೊಂದಿಗೆ ಯಾರೊಬ್ಬರ ಮಧ್ಯಸ್ಥಿಕೆಗೆ ಇಲ್ಲಿ ಅವಕಾಶ ತಪ್ಪಿಸಲಾಗಿದೆ. ಕೆಲಸಕ್ಕಾಗಿ ದಿನವೀಡಿ ಕಚೇರಿ ಮುಂದೆ ಕಾಯುವ ಕೆಲಸ ದೂರವಾಗಲಿದೆ ಎಂದು ನೊಡಲ್ ಆಫೀಸರ್ ಮೊಹಮ್ಮದ್ ಹಸೀಬ್ ಅಭಿಪ್ರಾಯವ್ಯಕ್ತಪಡಿಸಿದರು. ಸ್ಥಳೀಯ ಮದ್ದಾನಿ ಹಿರೇಮಠದ ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯವಹಿಸಿ, ಇಲಾಖೆ ನೂತನ ಕಾವೇರಿ 2.0 ತಂತ್ರಾಶ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಸಬ್ ರಿಜಿಸ್ಟರ್ ಭರತೇಶ ಎಸ್.ಬಿ ಪಾಟೀಲ ಮಾತನಾಡಿ, ವಿನೂತನ ತಂತ್ರಾಂಶದ ಸದುಯೋಗಪಡಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವರಿಕೆ ಮಾಡಿಕೊಂಡರು. ತಹಸೀಲ್ದಾರ ರಾಘವೇಂದ್ರ ಕೆ, ಸಿಬ್ಬಂದಿ ರೇವಮ್ಮ ಶಿವಣಗಿ, ಕಂಪ್ಯೂಟರ್ ಆಪರೇಟರ್ ಗಳಾದ ಮಹೇಶಕುಮಾರ, ಸೈಯದ್ ಸನಾ ಉಲ್ಲಾ , ಮೊಹಮ್ಮದ್ ಶಾದಾಬ್, ಶಶಿಧರ ರಂಜನಗಿ, ರಮೇಶ ಸೇರಿದಂತೆ ಪತ್ರ ಬರಹಗಾರರು, ವಕೀಲರು ಸೇರಿದಂತೆ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನೂತನ ತಂತ್ರಾಂಶ ಅಳವಡಿಕೆಯ ಪ್ರಮುಖ ಇಂಜಿನಿಯರಗಳಾದ ಗಂಗಾಧರ ಕೊಪ್ಪಳ, ಭರತೇಶ ಶಾನಭೋಗ್ ಕೊಪ್ಪಳ, ವಿನೋಧ ರಾಯಚೂರು ಹಾಗೂ ಮಹೇಶ ಬಳ್ಳಾರಿ ಇವರುಗಳು ಉಪಸ್ಥಿತರಿದ್ದರು..!!