ನಿಡಶೇಸಿ ವಿಶ್ವಾರಾಧ್ಯ ಶ್ರೀಗಳಿಂದ ಮತದಾನ ಜಾಗೃತಿ..!

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ಗ್ರಾಮದಲ್ಲಿ ನಿಡಶೇಸಿ ಗೆಜ್ಜೆಭಾವಿ ಹಿರೇಮಠದ ವಿಶ್ವಾರಾಧ್ಯ ಮರಿದೇವರು ಮತದಾನ ಜಾಗೃತಿ ಮೂಡಿಸಿದರು..!

ಗ್ರಾಮದ ಶ್ರೀಚೆನ್ನಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ 33ನೇ ವರ್ಷದ ಪುರಾಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ವಿಶ್ವಾರಾಧ್ಯ ಮರಿದೇವರು ಮಾತನಾಡಿ, ಭಾರತದ ಪ್ರತಿಯೊಬ್ಬ ಪ್ರಜೆಗೆ ಮತದಾನ ಜನ್ಮಸಿದ್ಧ ಹಕ್ಕು. ಅದನ್ನು ಯಾವುದೇ ಆಮಿಷಗಳಿಗೆ ಒಳಗಾಗದೆ, ಹಕ್ಕನ್ನು ಮಾರಿಕೊಳ್ಳದೆ ಯೋಗ್ಯ ಅಭ್ಯರ್ಥಿಗೆ ಮತ ನೀಡಬೇಕು. ಪ್ರಜಾಪ್ರಭುತ್ವ ಬುನಾದಿ ಗಟ್ಟಿಗೊಳಿಸಬೇಕು ಎಂದು ಕರೆ ನೀಡಿದರು. ಬಳಿಕ ಶ್ರೀಗಳ ನೇತೃತ್ವದಲ್ಲಿ ಸೋಮಶೇಖರ ಪಾಟೀಲ್ ಎಂಬುವರು ಪ್ರತಿಯೊಬ್ಬರಿಗೂ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಅಲ್ಲದೆ, ಫೂಂಚ್’ನಲ್ಲಿ ಇತ್ತೀಚೆಗೆ ಭಯೋತ್ಪಾದಕರು ನಡೆಸಿದ ಬಾಂಬ್ ದಾಳಿಯಿಂದ ಹುತಾತ್ಮರಾದ ಐವರು ಭಾರತೀಯ ಯೋಧರ ಆತ್ಮಕ್ಕೆ ಶಾಂತಿ ಕೋರಿ ಗ್ರಾಮಸ್ಥರೊಡಗೂಡಿ ಕ್ಯಾಂಡಲ್ ಬೆಳಗಿಸುವುದರ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಗ್ರಾ ಪಂ ಸದಸ್ಯ ಚಂದ್ರು ಪಾಟೀಲ್, ಚೆನ್ನಪ್ಪ ಬೇವಿನಾಳ, ಕಲ್ಲಪ್ಪ ಬೇವಿನಾಳ, ಶಂಕರಗೌಡ ಪಾಟೀಲ್, ಮಲ್ಲಯ್ಯ ಸ್ವಾಮಿ, ಮಹೇಶ, ಪ್ರದೀಪ, ಭಾರತಿ, ಮಲ್ಲಮ್ಮ, ಮಲ್ಕಜಮ್ಮ, ಕವಿತಾ, ಗಿರಿಜಮ್ಮ ಸೇರಿದಂತೆ ಇನ್ನಿತರರಿದ್ದರು..!!