ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಗಿಡ್ಡ ದೊಡ್ಡನಗೌಡಗ ಮತ ಹಾಕಬೇಡಿರಿ ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವ್ಯಂಗವಾಡಿದರು..!
ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿನ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿ ಅಮರೇಗೌಡ ಬಯ್ಯಾಪೂರು ಅವರಿಗೆ ಮತ ನೀಡಿ, ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಡಿರಿ ಎಂದರು. ರಾಶಿ ರಾಶಿ ಹಣದೊಂದಿಗೆ ಬಿಜೆಪಿಯವರು ಮತ ಕೊಂಡುಕೊಳ್ಳಲು ಬರುತ್ತಾರೆ ಎಚ್ಚರಿಕೆಯಿಂದರಬೇಕೆಂದರು. ನನ್ನ ಜೊತೆಗೆ ಬಯ್ಯಾಪೂರು ಅವರು ವಿಧಾನಸೌಧಕ್ಕೆ ಈ ಸಾರಿ ಬರಬೇಕೆಂದರು. ನನ್ನ ಸ್ವಾಭಿಮಾನಕ್ಕಾದರು ಮತ ನೀಡುವಂತೆ ತನ್ನ ಸಮಾಜ ಬಾಂಧವರಿಗೆ ಮನವಿಮಾಡಿಕೊಂಡರು..!!