ಕ್ರಿಕೆಟಿಗ ಅಜರುದ್ದಿನ್ ಕೊಪ್ಪಳಕ್ಕೆ ಭೇಟಿ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಖ್ಯಾತ ಕ್ರಿಕೆಟ್ ಆಟಗಾರ ಮೊಹಮ್ಮದ್ ಅಜರುದ್ದಿನ್ ಅವರು ಕೊಪ್ಪಳಕ್ಕೆ ಭೇಟಿ ನೀಡಲಿದ್ದಾರೆ..!

ದಿನಾಂಕ 04-05-2023 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಕೊಪ್ಪಳ ನಗರದ ಅಶೋಕ ವೃತ್ತದಿಂದ ಜವಹರ ರಸ್ತೆ ಮೂಲಕ ಗಡಿಯಾರ ಕಂಬದವರೆಗೆ ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಪರ ಮತಯಾಚಿಸಲಿದ್ದಾರೆ. ಭಾರತ ತಂಡದ ನಾಯಕನಾಗಿ ಕ್ರಿಕೆಟ್ ನಲ್ಲಿ ಸಾಕಷ್ಟು ಹೆಸರು ಮಾಡಿದವರ ಫೈಕಿ ಇವರೊಬ್ಬರು. ಆಟದಲ್ಲಿನ ಇವರ ಕ್ಷೇತ್ರ ರಕ್ಷಣೆಯ ಜಲಕ್ ಗಳು ಅವಿಸ್ಮರಣೀಯ. ಇಂತಹ ಹೆಸರಾಂತ ಕ್ರಿಕೆಟ್ ಪಟು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವ ರೀತಿಯಲ್ಲಿ ಕ್ರಿಕೆಟ್ ರನ್ನಗಳ ರಕ್ಷಣೆಯಂತೆ ಮತಗಳನ್ನು ಕಾಂಗ್ರೆಸ್ ಪರ ರಕ್ಷಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ..!!