ಕೊಪ್ಪಳದಲ್ಲಿ ಮಾವು ಮೇಳ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲಾ ತೋಟಗಾರಿಕೆ ಇಲಾಖೆ ಈ ವರ್ಷವು ಮಾವು ಮೇಳವನ್ನು ಹಮ್ಮಿಕೊಳ್ಳಲಿದೆ..!

ಮೇ ಮೂರನೇ ವಾರದಲ್ಲಿ ಮೇಳದ ದಿನಾಂಕ ನಿಗದಿಯಾಗಲಿದೆ. ಯಾವುದೇ ರಾಸಾಯನಿಕ ಇಲ್ಲದೆ, ಮಾಗಿದ ಮಾವಿನ ಹಣ್ಣುಗಳನ್ನು ನೇರವಾಗಿ ರೈತರಿಂದಲೇ ಖರೀದಿಸಬಹುದಾಗಿದೆ. ಇದರಿಂದ ದಲ್ಲಾಳಿಗಳ ಹಾವಳಿ ತಪ್ಪಿಸುವ ಇರಾದೆ ಇಲಾಖೆದ್ದಾಗಿದೆ. ವಿವಿಧ ತಳಿಗಳ ಮಾವು ಹಣ್ಣುಗಳು ಈ ವರ್ಷದ ಮೇಳದಲ್ಲಿ ಲಭ್ಯವಾಗುತ್ತವೆ. ಮಾವು ಪ್ರಿಯರು ಮೇಳದ ಸದುಪಯೋಗಪಡಿಸಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..!!