‘ಬಲರಾಮ’ ಇನ್ನೂ ನೆನಪು ಮಾತ್ರ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಬೆಂಗಳೂರು : ಮೈಸೂರು ದಸರಾ ವಿಜೃಂಭಣೆಯ ಜಂಬೂಸವಾರಿ ಮೆರವಣಿಗೆಯಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ದಾಖಲೆಯ ಆನೆ ಬಲರಾಮ (67) ನಮ್ಮನ್ನು ಅಗಲಿದೆ..!

ಮೈಸೂರು ದಸರಾ ಅಂದರೆ ತಟ್ಟನೆ ನೆನಪಾಗುತ್ತಿದ್ದ ಬಲರಾಮ ಆನೆಯು ಸುಮಾರು ದಿನಗಳಿಂದ ಅನಾರೋಗ್ಯದಿಂದ ಬಳಲಿರುವುದು ತಿಳಿದು ಬಂದಿದೆ. ಅತ್ಯಂತ ಸೌಮ್ಯ ಸ್ವಭಾವದ ಬಲರಾಮ ಇತ್ತೀಚೆಗೆ ತೀವ್ರ ಸ್ವರೂಪದಲ್ಲಿ ಅಸ್ವಸ್ಥಗೊಂಡಿತ್ತು. ನಾಗರಹೊಳೆ ಉದ್ಯಾನವನದ ಹುಣಸೂರು ಅರಣ್ಯ ಇಲಾಖೆ ವಿಭಾಗ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಬಲರಾಮನಿಗೆ ಚಿಕಿತ್ಸೆ ನೀಡಿದ್ದಾರೆ. ಗಂಟಲಿನಲ್ಲಿ ಹುಣ್ಣುಗಳು ಎದ್ದಿರುವ ಕಾರಣದಿಂದ ಆಹಾರ ಸೇವನೆಯನ್ನು ಇತ್ತೀಚೆಗೆ ನಿಲ್ಲಿಸಲಾಗಿತ್ತು ಎಂದು ತಿಳಿದು ಬಂದಿದೆ. ಆದರೆ, ಇಂದು ಸಾಯಂಕಾಲ ಸುಮಾರಿಗೆ ಪ್ರಾಣ ಬಿಟ್ಟಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ..!!