ಕರ್ತವ್ಯನಿರತ ವೀರ ಸೇನಾನಿಗೆ ಹೃದಯಘಾತ ಸಾವು..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಕರ್ತವ್ಯನಿರತ ಯೋಧನಿಗೆ ಹೃದಯಘಾತವಾಗಿ ಮರಣ ಹೊಂದಿದ ಘಟನೆ 09-05-2023 ರಂದು ರಾತ್ರಿ ಸುಮಾರಿಗೆ ಜರುಗಿದೆ..!

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ (ಹನುಮನಾಳ ಸಮೀಪದ) ಕಡಿವಾಲ ಗ್ರಾಮದ ವೀರಪ್ಪ ಕರಿಯಪ್ಪ ಹಿರೇಹಾಳ (39) ಮೃತ ವೀರ ಸೇನಾನಿ. ಭಾರತ ಮಾತೆಯ ಸೇವೆಗಾಗಿ ಪಂಜಾಬನ ಪತೀಂದ ಪ್ರದೇಶದ ಸೇನಾ (ಆರ್ಮಿ) ತುಕುಡಿವೊಂದರಲ್ಲಿ ಕರ್ತವ್ಯನಿರತ ಯೋಧನೆಗೆ ಸಾಯಂಕಾಲ 7.30 ರ ಸುಮಾರಿಗೆ ಏಕಾ ಏಕೀ ಹೃದಯಘಾತವಾಗಿದೆ. ಚಿಕಿತ್ಸೆ ಫಲಕಾರಿಯಾಗಿಲ್ಲ ಎಂದು ಕುಟುಂಬ ಮೂಲಗಳು ಸ್ಪಷ್ಟಪಡಿಸಿವೆ.

ಸದಾ ದೇಶ ಸೇವೆಯೇ ತನ್ನ ಉಸಿರಾಗಿಸಿಕೊಂಡಿದ್ದ ವೀರ ಸೇನಾನಿ ವೀರಪ್ಪ ಹಿರೇಹಾಳ ಬಾಲ್ಯದಿಂದಲೂ ಸೈನ್ಯ ಸೇರಬೇಕೆಂಬ ಮಹಾದಾಸೆ ಹೊಂದಿದ್ದ. ತನ್ನ ಛಲ ಸಾಧಿಸಲೇಬೆಕೆಂದು ಹತ್ತಾರು ಕಡೆ ಜರುಗಿದ ಸೈನ್ಯ ಭರ್ತಿಯಲ್ಲಿ ಭಾಗವಹಿಸುವ ಮೂಲಕ ಕಳೆದ 20 ವರ್ಷಗಳಿಂದ ಸೇವೆಯಲ್ಲಿದ್ದರು.

ಅಗಲಿಕೆ : ವೀರ ಸೇನಾನಿಯು ತಂದೆ ಕರಿಯಪ್ಪ ಹಿರೇಹಾಳ, ತಾಯಿ ನೀಲವ್ವ , ಪತ್ನಿ ರೇಖಾ ಮಕ್ಕಳಾದ ಕಿರಣ ಮತ್ತು ಕಿಶೋರ ಹಾಗೂ ಸಹೋದರ ಯಮನೂರಪ್ಪ ಸಹೋದರಿ ದಿವ್ಯಾ ಸೇರಿದಂತೆ ಮಿತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ..!

ಶಿಕ್ಷಣ : ವೀರ ಸೇನಾನಿ ವೀರಪ್ಪ ಅವರು ಪ್ರಾಥಮಿಕ ಶಿಕ್ಷಣವನ್ನು ಕಡಿವಾಲ ಮತ್ತು ಪಟ್ಟಲಚಿಂತಿ ಹಾಗು ಪ್ರೌಢ ಶಿಕ್ಷಣವನ್ನು ಮಾಲಗಿತ್ತಿ ಸರಕಾರಿ ಪ್ರೌಢ ಶಾಲೆಯಲ್ಲಿ ಅಭ್ಯಾಸಗೈದಿದ್ದರು.

ನೇಮಕ : ಜಮ್ಮು ಕಾಶ್ಮೀರದ ಸೀಯಾಚೀನ ಪ್ರದೇಶದಲ್ಲಿ ವೃತ್ತಿ ಆರಂಭಿಸಿದ ಇವರು ಭಾರತದ ಬಹುತೇಕ ಗಡಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿರುವುದು ಇವರ ವಿಶೇಷತೆ.

” ನನ್ನ ಮರಣ ಭಾರತ ಮಾತೆಯ ಕರ್ತವ್ಯದಲ್ಲಿದ್ದಾಗಲೇ ಆಗಬೇಕು. ನನ್ನ ಬದುಕಿನ ಮಹಾದಾಸೆ ಇದಾಗಿದೆ ಎಂದು ತನ್ನ ಬಾಲ್ಯದ ಗೆಳೆಯರೊಂದಿಗೆ ಸದಾ ಕಾಲ ತನ್ನ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದ”

## ಬಾಲ್ಯದ ಗೆಳೆಯರು, ಕಡಿವಾಲ ಗ್ರಾಮ.