ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಪಂಜಾಬ ರಾಜ್ಯದ ಪತೀಂದಾದ ಭಾರತೀಯ ಸೇನಾ ಕೇಂದ್ರದಲ್ಲಿ (ತುಕುಡಿಯಲ್ಲಿ) ಮೃತಪಟ್ಟಿರುವ ಯೋಧನ ಅಂತಿಮ ಮೆರವಣಿಯೂ ಬೆಳಗ್ಗೆ 8 ಗಂಟೆಗೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದಲ್ಲಿ ಜರುಗಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ..!
ಪತೀಂದಾ ಸೇನಾ ಕೇಂದ್ರದಿಂದ ನವದೆಹಲಿಗೆ ಅಲ್ಲಿಂದ ಬೆಂಗಳೂರು ಮೂಲಕ ಕೊಪ್ಪಳ (ಬಸಾಪೂರು ಎಂ.ಎಸ್.ಪಿ.ಎಲ್ ಏರ್ ಡ್ರಮ್) ದಿಂದ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಹನುಮಸಾಗರ ಪೊಲೀಸ್ ಠಾಣೆಗೆ ಯೋಧ ಹವಾಲ್ದಾರ್ ವೀರಪ್ಪ ಕರಿಯಪ್ಪ ಹಿರೇಹಾಳ ಅವರ ಪಾರ್ಥಿವ ಶರೀರ ತಲುಪಲಿದೆ. ಬೆಳಿಗ್ಗೆ 8 ಸುಮಾರಿಗೆ ಹನುಮನಾಳದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಹಮ್ಮಿಕೊಳ್ಳಾಗುವುದು.
ಬಳಿಕ ಹನುಮನಾಳ ಸಮೀಪದ ಕಡಿವಾಲ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಮಧ್ಯಾಹ್ನ ಸುಮಾರಿಗೆ ಗ್ರಾಮದ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ..!!
Rest in peace Sir