ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಹೃದಯಘಾತದಿಂದ ಮರಣ ಹೊಂದಿದ ವೀರಪ್ಪ ಕರಿಯಪ್ಪ ಹಿರೇಹಾಳ ಯೋಧನ ಅಂತ್ಯ ಕ್ರಿಯೆಯು ತವರು ಗ್ರಾಮ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡಿವಾಲ ಗ್ರಾಮದಲ್ಲಿ ಜರುಗಿತು..!
ದಿನಾಂಕ 11-05-2023 ರಂದು ರಾತ್ರಿ 10-30 ಕ್ಕೆ ಕುಷ್ಟಗಿ ಪೊಲೀಸ್ ಠಾಣೆಗೆ ಯೋಧನ ಪಾರ್ಥಿವಶರೀರ ತರಲಾಗಿತ್ತು. ದಿನಾಂಕ 12-05-2023 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ತಾಲೂಕಿನ ಮಾಲಗಿತ್ತಿ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ (ತೆರೆದ ವಾಹನದಲ್ಲಿನ) ಪಾರ್ಥಿವಶರೀರದ ಮೆರವಣಿಗೆಯೂ ಪಟ್ಟಲಚಿಂತಿ ಹಾಗೂ ಹನುಮನಾಳ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಯಶಸ್ವಿಯಾಗಿ ಜರುಗಿತು.
ಬಿಟ್ಟು ಹೋದ್ಯಾ ವೀರಪ್ಪ..! : ಕುಟುಂಬಸ್ಥರು ಸೇರಿದಂತೆ ವೀರ ಯೋಧ ವೀರಪ್ಪ ಹಿರೇಹಾಳ ಅವರ ಆತ್ಮೀಯರು, ಒಡನಾಡಿಗಳು ವೀರಪ್ಪ ಅವರ ಹೆಸರು ಹೇಳುವ ಮೂಲಕ ಕಣ್ಣೀರು ಹಾಕಿದ ಪ್ರಸಂಗ ಜರುಗಿತು. ಇಡೀ ಗ್ರಾಮಮೇ ಯೋಧನ ಪಾರ್ಥಿವಶರೀರ ಬರುವಿಕೆಗಾಗಿ ಕಾಯ್ದು ಕುಳಿತುಕೊಂಡಿದ್ದರು. ಮಾಲಗಿತ್ತಿ, ಪಟ್ಟಲಚಿಂತಿ ಹಾಗೂ ಹನುಮನಾಳ ಗ್ರಾಮದಲ್ಲಿ ಜರುಗಿದ ಮೆರವಣಿಗೆ ಉದ್ದಕ್ಕೂ ತೆರೆದ ವಾಹನದಲ್ಲಿದ್ದ ಪಾರ್ಥಿವಶರೀರಕ್ಕೆ ಹೂಗಳ ಸುರಿಮಳೆಗೈಲಾಗಿತು. ವಿವಿಧ ವಾದ್ಯಗಳ ಮೂಲಕ ಮೆರವಣಿಗೆ ಕೈಗೊಳ್ಳಲಾಗಿತು.
ಸರಕಾರಿ ಗೌರವ : ಕಡಿವಾಲ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಕೆಲ ಗಂಟೆಗಳ ಕಾಲ ಸೇನಾ ಪಟ್ಟಿಗೆಯಲ್ಲಿದ್ದ ಪಾರ್ಥಿವಶರೀರವನ್ನು ಪ್ರದರ್ಶನಕ್ಕಿಡಲಾಗಿತು. ಯೋಧನ ಅಂತ್ಯಕ್ರಿಯೆಯೂ ಹಿಂದು ಸಂಪ್ರದಾಯದಂತೆ ವಿಧಿವಿಧಾನಗಳ ಕೈಗೊಳ್ಳಲಾಗಿತ್ತು. ಮೂರು ಸುತ್ತು ಗುಂಡುಗಳನ್ನು ಸಿಡಿಸುವ ಮೂಲಕ ಯೋಧನೆಗೆ ನೀಡಬೇಕಾದ ವಿಶೇಷವಾದ ಗೌರವ ಸಲ್ಲಿಸಲಾಗಿತು. ಶವಪೆಟ್ಟಿಗೆ ಮೇಲೆ ಹಾಕಿದ್ದ ರಾಷ್ಟ್ರ ಧ್ವಜವನ್ನು ಯೋಧನ ಪತ್ನಿ ರೇಖಾ ಹಿರೇಹಾಳ ಅವರಿಗೆ ಸಮರ್ಪಿಸಿಲಾಗಿತು. ತಾಯಿ ಜೊತೆಗಿದ್ದ ಏನನ್ನು ಅರಿಯದ ಪುಟ್ಟ ಕಂದಮ್ಮಗಳಾದ ಕಿರಣ ಹಾಗೂ ಕಿಶೋರ್ ಅವರುಗಳು ತಂದೆ ವೀರಯೋಧನ ಅಂತ್ಯಕ್ರಿಯೆಗೆ ಸಾಕ್ಷಿಯಾಗಿದ್ದು ನೆರದಿದ್ದವರ ಕಣ್ಣುಗಳನ್ನು ತೇವ ಮಾಡಿದವು. ಸಂಸದ ಸಂಗಣ್ಣ ಕರಡಿ, ತಹಶಿಲ್ದಾರ ರಾಘವೇಂದ್ರರಾವ್ ಕೆ, ನಿವೃತ್ತ ಯೋಧರ ಸಂಘದ (ಪ್ಯಾರಾ ಮಿಲಿಟರಿ) ಅಧ್ಯಕ್ಷ ಶರಣಪ್ಪ ಗುಡದೂರು, ಪ್ರಧಾನ ಕಾರ್ಯದರ್ಶಿ ಭೀಮಪ್ಪ ಸೋಮನಕಟ್ಟಿ, ತುಕಾರಾಂ ದಾಸರ, ಮಂಜುನಾಥ ಯಲ್ಲಪ್ಪಗೌಡರ, ರಂಗಪ್ಪ ತಳವಾರ, ಬಾಬು ಸಾಬ್ ಬಾಗವಾನ್, ಈಶಪ್ಪ ಅಳಗೋಡಿ, ಬಸವರಾಜ ಹಿರೇಮಠ ಹಾಗೂ ಸಿದ್ಧಲಿಂಗಯ್ಯ ಹಿರೇಮಠ ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ಸಾವಿರಾರು ಜನ ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು..!!