ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಲಾರಿ ಹಾಗೂ ಕಾರುಗಳ ನಡುವೆ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಮಕ್ಕಳು ಸೇರಿದಂತೆ ಆರು ಜನ ಧಾರುಣವಾಗಿ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ಕುಷ್ಟಗಿ ಬಳಿ ಬಳಿ ಘಟನೆ ಸಂಭವಿಸಿದೆ..!
ಪಟ್ಟಣದಿಂದ ಇಳಕಲ್ ಮಾರ್ಗದ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ಕಲಕೇರಿ ಫಾರ್ಮ್ ಬಳಿ ಸಂಜೆ 5.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ತಮೀಳನಾಡಿನಿಂದ ಗುಜರಾತ್ ಕಡೆಗೆ ಸಂಚರಿಸುತಿದ್ದ ಲಾರಿ ಹಾಗೂ ವಿಜಯಪುರದಿಂದ ಬೆಂಗಳೂರಿನತ್ತ ಸಂಚರಿಸುತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಲಾರಿಯ ಮುಂಭಾಗದಲ್ಲಿ ಡಿಕ್ಕಿಯಾಗಿರುವ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ರಾಜಪ್ಪ ಬನಗೋಡಿ, ರಾಘವೇಂದ್ರ ಕಾಂಬಳೆ, ಅಕ್ಷಯ ಶಿವಶರಣ, ಜಯಶ್ರೀ ಕಾಂಬಳೆ ಸೇರಿದಂತೆ ಇಬ್ಬರು ಮಕ್ಕಳಾದ ರಾಕಿ ಮತ್ತು ರಷ್ಮಿಕಾ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಷ್ಟಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ..!!