ನಿವೇದಿತ ಕರಡಿ ತಾಲೂಕಿಗೆ ದ್ವೀತಿಯ ಸ್ಥಾನ..!

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ತಳುವಗೇರಾ ಆದರ್ಶ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳ ಮೊದಲನೇ ಪಟ್ಟಿ ಬಿಡುಗಡೆಯಾಗಿದೆ. ಕುಷ್ಟಗಿ ತಾಲೂಕಿನ ನಿಲೋಗಲ್ ದಿ ವಿಜಡಮ್ ಶಾಲೆಯ ಬಿಳೇಕಲ್ ಗ್ರಾಮದ ನಿವೇದಿತಾ ಮಾರುತಿ ಕರಡಿ ಎಂಬ ವಿದ್ಯಾರ್ಥಿನಿ ಶೇಕಡಾ 88 ರಷ್ಟು ಅಂಕಗಳನ್ನು ಪಡೆಯುವ ಮೂಲಕ (ಆಂಗ್ಲ ಮಾಧ್ಯಮಗಳ ಶಾಲೆಗಳಲ್ಲಿ) ತಾಲೂಕಿಗೆ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾಳೆ..!

 

ಬಿಳೇಕಲ್ ಗ್ರಾಮದವರಾದ ಸುಚಿತ್ರ ಸಿದ್ದಪ್ಪ ಡೊಳ್ಳಿನ, ಸಂಪ್ರೀತಾ ಯಲ್ಲಪ್ಪ ಕಾಡದ ಹಾಗೂ ವಕ್ಕನದುರ್ಗಾ ಗ್ರಾಮದ ಸೇವಂತಿ ಶರಣಪ್ಪ ಗಡಗಿ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಮುಖ್ಯಗುರು ಗುರು ಅಂಗಡಿ ತಿಳಿಸಿದ್ದಾರೆ.

ಅಭಿನಂದನೆ : ಶಾಲೆಯ ವಿದ್ಯಾರ್ಥಿಗಳ ಫಲಿತಾಂಶಕ್ಕೆ ಸಂಸ್ಥೆಯ ಅಧ್ಯಕ್ಷ ಶರಣಯ್ಯ ಹಿರೇಮಠ, ಕಾರ್ಯದರ್ಶಿ ಶಂಭು ಹಿರೇಮಠ, ಉಪಾಧ್ಯಕ್ಷ ಬಸವರಾಜ ಹಿರೇಮಠ ಸೇರಿದಂತೆ ಸಿಬ್ಬಂದಿ ವರ್ಗವು ಅಭಿನಂದಿಸಿದೆ..!!