ರಸ್ತೆ ಅಭಿವೃದ್ಧಿ : ಎಸ್ಟೀಮೇಟನಲ್ಲೊಂದು..! ಮಾಡಿದ್ದೊಂದು…!!

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಇತ್ತೀಚೆಗೆ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ಲಾನ್, ಎಂಡ್ ಎಸ್ಟೀಮೇಟ್ ಗಳಲ್ಲಿರುವಂತೆ ಕಾಮಗಾರಿಗಳು ಆಗಿಲ್ಲವೆಂಬ ಆರೋಪ ಕೇಳಿಬಂದಿದೆ..!

ರಸ್ತೆ ಅಭಿವೃದ್ಧಿಗಾಗಿ ಪುರಸಭೆಯು ಎಸ್.ಎಫ್. ಸಿ ವಿಶೇಷ ಅನುದಾನದಡಿ ಕುಷ್ಟಗಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಿಂದ ಬಸವೇಶ್ವರ ವೃತ್ತದವರೆಗೆ, ಬಸವೇಶ್ವರ ವೃತ್ತದಿಂದ ಮಾರುತಿ ಸರ್ಕಲ್ ಮಾರ್ಗವಾಗಿ (ಗಜೇಂದ್ರಗಡ ರಸ್ತೆ) ಸಂದೀಪ ನಗರದವರೆಗೆ ಮತ್ತು ಬಸವೇಶ್ವರ ವೃತ್ತದಿಂದ ಟಿಪ್ಪು ಸುಲ್ತಾನ್ ಸರ್ಕಲ್ ವರೆಗಿನ ಚರಂಡಿ, ಡಿವೈಡರ್ ಮತ್ತು ಪೇವರ್ಸ ಕಾಮಗಾರಿಗಳನ್ನು ಕೈಗೊಳ್ಳಲು 4 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಆದರೆ, ರಾಷ್ಟ್ರೀಯ ಹೆದ್ದಾರಿಯಿಂದ ಆರಂಭವಾಗಬೇಕಾಗಿದ್ದ ಕಾಮಗಾರಿ ಕೆನರಾ ಬ್ಯಾಂಕ್ ಬಳಿಯ ಮೆಡಿಕಲ್ ಸ್ಟೋರ್ ನಿಂದ ಆರಂಭಿಸಲಾಗಿದೆ. ಇನ್ನೊಂದು ಕಾಮಗಾರಿ ಬಸವೇಶ್ವರ ವೃತ್ತದಿಂದ ಆರಂಭವಾಗಿ ಮಾರುತಿ ಸರ್ಕಲ್ ಮಾರ್ಗವಾಗಿ ಸಂದೀಪ್ ನಗರದವರೆಗೆ ಮುಕ್ತಾಯವಾಗಬೇಕಾಗಿದ್ದು ಬಿ.ಎಸ್.ಎನ್.ಎಲ್ ಕಚೇರಿ ಬಳಿಕ ಕೆಲ ಮೀಟರ್ ಗಳಷ್ಟು ಮಾತ್ರ ಕಾಮಗಾರಿ ಕೈಗೊಳ್ಳಕಾಗಿದೆ ಎಂಬ ಆರೋಪ ಜನ ಸಾಮಾನ್ಯರದ್ದಾಗಿದೆ. ಅಪೂರ್ಣಗೊಳಿಸಿದ ಕಾಮಗಾರಿ ಕುರಿತು ಸಂಬಂಧಿಸಿದ ಅಧಿಕಾರಿಗಳು ಸ್ಪಷ್ಟಪಡಿಸಬೇಕಾಗಿದೆ ಅಂದಾಗ ಮಾತ್ರ ನಿವಾಸಿಗಳಲ್ಲಿ ಮೂಡಿರುವ ಸಂಶಯಕ್ಕೆ ಉತ್ತರ ಸಿಗುತ್ತದೆ..!?

(ಮುಂದುವರೆಯಲಿದೆ..)