ಅಪೂರ್ಣ ಕಾಮಗಾರಿಗೆ 4 ಕೋಟಿ ಬಿಲ್ ವಿದ್ಯೆ..!?

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ತರಾತುರಿಯಲ್ಲಿ ಕೈಗೊಂಡಿರುವ ಅಪೂರ್ಣ ಕಾಮಗಾರಿಗಳಿಗೆ 4 ಕೋಟಿ ರೂಪಾಯಿಗಳ ಬಿಲ್ ವಿದ್ಯೆಯ ಎಸ್ಟೀಮೇಟ್ ಬಹಿರಂಗವಾಗಿರುವುದು ಪಟ್ಟಣದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ..!?

ಎಸ್.ಎಫ್. ಸಿ ವಿಶೇಷ ಅನುದಾನದಡಿ ಕುಷ್ಟಗಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಿಂದ ಬಸವೇಶ್ವರ ವೃತ್ತದವರೆಗೆ, ಬಸವೇಶ್ವರ ವೃತ್ತದಿಂದ ಮಾರುತಿ ಸರ್ಕಲ್ ಮಾರ್ಗವಾಗಿ (ಗಜೇಂದ್ರಗಡ ರಸ್ತೆ) ಸಂದೀಪ ನಗರದವರೆಗೆ ಮತ್ತು ಬಸವೇಶ್ವರ ವೃತ್ತದಿಂದ ಟಿಪ್ಪು ಸುಲ್ತಾನ್ ಸರ್ಕಲ್ ವರೆಗಿನ ಚರಂಡಿ, ಡಿವೈಡರ್ ಮತ್ತು ಪೇವರ್ಸ ಕಾಮಗಾರಿಗಳನ್ನು ಕೈಗೊಳ್ಳಲು 4 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಆದರೆ, ಕಾಮಗಾರಿಗಳು ಮಾತ್ರ ಎಸ್ಟೀಮೇಟ್ ಎಂಡ್ ಪ್ಲಾನ್ ನಲ್ಲಿ ನಮೂದಿಸಿರುವ ರೀತಿಯಲ್ಲಿ ಜರುಗುತ್ತಿಲ್ಲವಾಗಿವೆ. ಕೆಲ ಕಡೆ ಕಾಮಗಾರಿಗಳು ಕಳಪೆ ಮಟ್ಟದ್ದಾಗಿರುತ್ತವೆ. ಅಲ್ಲದೆ, ಅವೈಜ್ಞಾನಿಕ ಕಾಮಗಾರಿಗಳು ಜರುಗಿರುವ ಕುರಿತು ಪಟ್ಟಣದ ನಿವಾಸಿಗಳು ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಕಾಮಗಾರಿಗಳು ಅಪೂರ್ಣವಾಗಿರುವುದು ಕಂಡುಬಂದಿವೆ.  ಈ ಕುರಿತು ‘ಕೃಷಿ ಪ್ರಿಯ’ ಪತ್ರಿಕೆ ಕಾಮಗಾರಿಗಳ ಇಂಚಿಚು ಮಾಹಿತಿಗಳ ಸರಣಿ ವರದಿಗಳನ್ನು ಪ್ರಸಾರ ಮಾಡುತ್ತಿದೆ ನಿರೀಕ್ಷಿಸಿರಿ..!!

(ಮುಂದುವರೆಯಲಿದೆ..)