ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಕಳಮಳ್ಳಿ ತಾಂಡಾದ ತೋಟವೊಂದರಲ್ಲಿ ಕಟ್ಟಿ ಹಾಕಲಾಗಿದ್ದ 2 ಎಮ್ಮೆ, 2 ಎತ್ತು ಸೇರಿ 7 ಆಕಳುಗಳ ಮೇಲೆ ಆಕಸ್ಮಿಕ ವಿದ್ಯುತ್ ತಂತಿ ಹರಿದುಬಿದ್ದು ಜಾನುವಾರುಗಳು ಧಾರುಣವಾಗಿ ಸಾವನ್ನಪ್ಪಿದ ಘಟನೆ ಜರುಗಿದೆ..!
ರೈತರಾದ ಭದ್ರಪ್ಪ ಪವಾರ, ರಾಮಪ್ಪ ಪವಾರ್ ಎಂಬುವರಿಗೆ ಸೇರಿದ ತೋಟದಲ್ಲಿ ಈ ದುರ್ಘಟನೆ 30-05-2023 ರಂದು ಬೆಳಗ್ಗೆ 9.30 ರ ಸುಮಾರಿಗೆ ಘಟನೆ ನಡೆದಿದೆ.
ಬೆಲೆ ಬಾಳುವ ಜಾನುವಾರುಗಳನ್ನು ಕಳೆದುಕೊಂಡ ರೈತ ಸಹೋದರರು ಕಂಗಾಲಾಗಿದ್ದಾರೆ. ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ. ಸೂಕ್ತ ಪರಿಹಾರಕ್ಕಾಗಿ ಸರಕಾರವನ್ನು ಈ ಭಾಗದ ರೈತರು ಒತ್ತಾಯಿಸಿದ್ದಾರೆ..!!