ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.!
ಗ್ರಾಮದ ಡ್ರೈವರ್ ವೃತ್ತಿಯಲ್ಲಿರುವ 35 ವಯಸ್ಸಿನ ಪೀರಸಾಬ, 30 ವಯಸ್ಸಿನ ಶಾರವ್ವ ಎಂಬುವರು ಮೃತ ದುರ್ದೈವಿಗಳು.
ಈ ಇಬ್ಬರೂ ಅನೈತಿಕ ಸಂಬಂಧ ಹೊಂದಿರುವುದನ್ನು ತಿಳಿದ ಪೀರಸಾಬನ ಪತ್ನಿ ಮೃತ ಶಾರವ್ವಳೊಂದಿಗೆ ಕಲಹಕ್ಕೆ ಇಳಿದಿದ್ದಾಳೆ. ಗ್ರಾಮದ ಗುರುಹಿರಿಯರು ಸಮಸ್ಯೆ ಪರಿಹರಿಸುವುದಾಗಿ ಬುದ್ದಿವಾದ ಹೇಳಿ ಕಲಹ ತಿಳಿಗೊಳಿಸಿದ್ದಾರೆ. ಘಟನಾ ನಂತರ ರಾತ್ರಿ ವೇಳೆ ಪೀರಸಾಬ ಮತ್ತು ಶಾರವ್ವ ಈ ಇಬ್ಬರು ವಿಶ ಸೇವಿಸಿ ಮೃತಪಟ್ಟಿದ್ದಾರೆ. ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ..!