ಬಾ ಮಗು ನೀ ಶಾಲೆಗೆ..!
ಬೇಸಿಗೆ ರಜೆ ಮುಗಿದು, ಮತ್ತೆ ಶುರುವಾಗಿದೆ ಶಾಲೆ
ಸುಡುವ ಬಿಸಿಲ ಕಳೆದು, ಕಲಿಯೋಣ ಕನ್ನಡ ಅಕ್ಷರಮಾಲೆ
ಮೋಜು ಮಸ್ತಿಯ ತೊರೆದು, ಶಾಲೆಗೆ ತೆರೆಳಿ ಜೂನ್ ನಿಂದಲೆ
ಶಾಲೆ ಸ್ವಚ್ಛವ ತೊಳೆದು, ವಿದ್ಯಾಭ್ಯಾಸ ಕಲಿಯೋಣ ಇಂದಿನಿಂದಲೇ..
ತೆರೆದಿದೆ ಶಾಲೆ ಬಾ ಮಗು ನೀ ಶಾಲೆಗೆ
ಹೊಸ ಬಟ್ಟೆ ಹೊಸ ಪುಸ್ತಕಗಳೊಂದಿಗೆ ಸಿದ್ಧರಾಗಿ ಕಲಿಕೆಗೆ
ಆಟ ಪಾಠ ಮಧ್ಯಾಹ್ನದ ಬಿಸಿಯೂಟ ನಿಮಗೆ
ಬಾರದಿರುವವರನ್ನ ತಪ್ಪಿಸದೆ ಕರೆದುಕೊಂಡು ಬಾ ತರಗತಿಗೆ..
ಜ್ಞಾನ ಭಂಡಾರದ ಗುರುವಿನ ಮಾರ್ಗದರ್ಶನದಿ
ಅಮೂಲ್ಯ ಸ್ನೇಹಿತರ ಬಾಂಧವ್ಯದ ಗೆಳೆತನದಿ
ಸರಸ್ವತಿಯ ಪ್ರಾರ್ಥಿಸು ಜ್ಞಾನವಗಳಿಸು ಈ ಕ್ಷಣದಿ
ಪ್ರತಿ ಗುರುವಿಗೆ ವಿನಮ್ರನಾಗು ವಿನಯಶೀಲದಿ..
ನೆನಪಿರಲಿ ತಾಯಿಯೇ ಮೊದಲ ಗುರುವಿದ್ದಂತೆ
ಕಲಿಸುವ ಗುರುವೇ ಎರಡನೆಯ ತಾಯಿ ಇದ್ದಂತೆ
ಕಿರಿಯರಿಗೆ ದಾರಿದೀಪವಾಗು ಪ್ರಜ್ವಲಿಸುವ ದೀಪವಿದ್ದಂತೆ
ಹಿರಿಯರಿಗೆ ಆತ್ಮೀಯನಾಗು ಪ್ರೀತಿಸುವ ಹೂವಂತೆ..!
ಮುತ್ತು ಯ ವಡ್ಡರ
ಶಿಕ್ಷಕರು ಬಾಗಲಕೋಟೆ