ಈ ಶಾಲಾ ಮಕ್ಕಳ ಸಂಚಾರಕ್ಕೆ ಜೆಸಿಬಿ ಗತಿ..!

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಖಾಪೂರ ಗ್ರಾಮದ ಶಾಲಾ ವಿದ್ಯಾರ್ಥಿಗಳ ಸಂಚಾರಕ್ಕೆ ಜೆಸಿಬಿ ವಾಹನದ ಬಕೀಟ್ ಗತಿಯಾಗಿದೆ..!

ವಾಹನಗಳ ವ್ಯವಸ್ಥೆ ಇಲ್ಲದಿರುವುದರಿಂದ ಶಾಖಾಪೂರು ಗ್ರಾಮದ ಸುಮಾರು ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಸುಮಾರು ಮೂರ್ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಯಲಬುರ್ಗಾ ತಾಲೂಕಿನ ಹಿರೇಅರಳಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ನಡೆದುಕೊಂಡೇ ನಿತ್ಯ ತೆರಳಬೇಕು. ಒಮ್ಮೊಮ್ಮೆ ಜಮೀನುಗಳಿಗೆ ಅಥವಾ ಇತರೆ ಕಾರ್ಯಗಳಿಗೆ ತೆರಳುವ ಟ್ರ್ಯಾಕ್ಟರ್ ಹಾಗೂ ಜೆಸಿಬಿ ಯಂತ್ರಗಳ ಆಸರೆ ಪಡೆಯುವುದು ಸಾಮಾನ್ಯ ಎಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ ಜೆಸಿಬಿ ವಾಹನದ ಬಕೀಟನಲ್ಲಿ ಹಾಗೂ ಕ್ಯಾಬೀನಲ್ಲಿ ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿರುವುದು ಮನಕಲುಕುವಂತಿರುತ್ತದೆ. ಇಂತಹ ದೃಶ್ಯ ಕಂಡ ಪ್ರಜ್ಞಾವಂತ ನಾಗರಿಕರು ವಿದ್ಯಾರ್ಥಿಗಳ ಪ್ರಯಾಣಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ..!!